ಕಮಲ ಪಾಳಯದ ಎರಡು ಬಣಗಳ ಸಮರ, ಆರೋಪ ಪ್ರತ್ಯಾರೋಪ

IMG20250130
Published on

ಚಿಕ್ಕಬಳ್ಳಾಪುರ: ನಿರೀಕ್ಷೆಯಂತೆ ಜಿಲ್ಲೆಯಲ್ಲಿ ಕಮಲ ಪಾಳಯದ ಎರಡು ಬಣಗಳ ಸಮರವು ಆರೋಪ ಪ್ರತ್ಯಾರೋಪಗಳೊಂದಿಗೆ ಮುಂದುವರೆದಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಬೆಂಬಲಿತ ಬಣ ಹಾಗೂ ಸಂಸದ ಡಾ ಕೆ.ಸುಧಾಕರ್ ಬಣವು ಬಹಿರಂಗ ಟೀಕೆಯಲ್ಲಿ ತೊಡಗಿದ್ದು ಪಕ್ಷದ ಆಂತರಿಕ ಜಗಳದ ರಂಪಾಟವು ಬೀದಿಗೆ ಬಂದಿದೆ.

ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಅಸಮಾಧಾನಗೊಂಡು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿ ಟೀಕಿಸಿದ್ದ ಸಂಸದರ ವಿರುದ್ಧ ಸ್ವಪಕ್ಷೀಯ ನಾಯಕರು ಮುಗಿ ಬಿದ್ದಿದ್ದಾರೆ. ವರಿಷ್ಠರಿಗೆ ಆಂತರಿಕ ದೂರು ಸಲ್ಲಿಕೆಗೆ ಸೀಮಿತವಾಗಿದ್ದವರು ಪರಸ್ಪರ ರಾಜಕೀಯ ಹುಳುಕುಗಳನ್ನು ಬಹಿರಂಗಪಡಿಸುತ್ತಿದ್ದಾರೆ. ಮತ್ತೊಂದೆಡೆ ಸಂಸದರನ್ನು ಬೆಂಬಲಿಸಿ ಹಲವರು ಹೇಳಿಕೆಗಳನ್ನು ನೀಡುತ್ತಿದ್ದು ಬೀದಿಯಲ್ಲಿ ಮೂಲ ಬಿಜೆಪಿಗರು, ವಲಸಿಗ ಬಿಜೆಪಿ ಬಣಗಳ ಮಾತಿನ ಬಡಿದಾಟವು ಜೋರಾಗಿದೆ.‌ ಇದು ಸಹಜವಾಗಿ ನಿಷ್ಠಾವಂತ ಕಾರ್ಯಕರ್ತರ ಬೇಸರಕ್ಕೆ ಕಾರಣವಾಗಿದೆ.

*ಎರಡು ಬಣಗಳ ಸೃಷ್ಟಿ*

ಕಳೆದ 2019 ರಲ್ಲಿ ಕಾಂಗ್ರೆಸ್ ತೊರೆದು ಬೆಂಬಲಿಗರೊAದಿಗೆ ಡಾ ಕೆ.ಸುಧಾಕರ್ ಬಿಜೆಪಿ ಸೇರ್ಪಡೆಯಾದ ಬಳಿಕ ಬಿಜೆಪಿಯಲ್ಲಿ ಮೂಲ,ವಲಸಿಗ ಬಣಗಳು ಸೃಷ್ಟಿಯಾಗಿದೆ. ಕಳೆದ ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆ ಪದಾಧಿಕಾರಿಗಳ, ವಿವಿಧ ಹುದ್ದೆಗಳಿಗೆ ನೇಮಕದ ವೇಳೆ ಸಂಸದರ ಬೆಂಬಲಿಗರಿಗೆ ಮಣೆ ಹಾಕಲಾಗಿತ್ತು. ಇದರೊಂದಿಗೆ ಮೂಲ, ವಲಸಿಗ ಗಲಾಟೆ ಶುರುವಾಗಿದ್ದು ಆಂತರಿಕ ಸಭೆಗಳಲ್ಲಿ ಅಪಸ್ವರಗಳು ಕೇಳಿ ಬಂದಿದ್ದವು. ಹಲವು ಬಾರಿ ಅನೇಕರು ರಾಜ್ಯ ಮಟ್ಟದ ನಾಯಕರಿಗೆ ದೂರು ಸಲ್ಲಿಸಿದ್ದರು. ಇದೀಗ ನೂತನ ಜಿಲ್ಲಾಧ್ಯಕ್ಷರ ನೇಮಕದಲ್ಲಿ ಮೂಲ ಬಿಜೆಪಿಗರು ಯಶಸ್ವಿಯಾಗಿದ್ದಾರೆ.

*ಪರಿಣಾಮ ನೆಟ್ಟಗಿರುವುದಿಲ್ಲ

ಸಂಸದ ಡಾ ಕೆ.ಸುಧಾಕರ್ ತುಳಿಯಲು ಷಡ್ಯಂತ್ರ ಮಾಡುವ, ದುರುದ್ದೇಶ ಪೂರ್ವಕವಾಗಿ ತೊಂದರೆ ಕೊಡಲು ಯತ್ನಿಸಿದ್ದಲ್ಲಿ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಸಂಸದರ ಬೆಂಬಲಿಗರು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಸ್ವಪಕ್ಷೀಯ ಶಾಸಕರು, ಪದಾಧಿಕಾರಿಗಳು ಬಾಯಿಗೆ ಬಂದAತೆ ಸಂಸದರ ಬಗ್ಗೆ ಮಾತನಾಡುತ್ತಿದ್ದಾರೆ. ಇದನ್ನು ಸಹಿಸಲಾಗುವುದು. ಒಂದು ವೇಳೆ ತೊಂದರೆ ನೀಡಲು ಬಂದಲ್ಲಿ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net