

ಬಸವನಬಾಗೇವಾಡಿ: ಮಠ, ಮಂದಿರಗಳು ಹಾಗೂ ಭಕ್ತರ ಆಸ್ತಿ ಉಳಿವಿಗಾಗಿ ರಾಜ್ಯದ ಮಠಾಧೀಶರು ಬೀದಿಗಿಳಿದು ಹೋರಾಟ ಮಾಡಿದರೆ ತಪ್ಪೇನಿದೆ ಎಂದು ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಶ್ರೀಗಳು ಹೇಳಿದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರ ಹಾಗೂ ವಕ್ಫ್ ಬೋರ್ಡ್ ಮಠ, ಮಂದಿರಗಳ ಹಾಗೂ ರೈತರ ಜಮೀನಿನ ಪಹಣಿ ಕಾಲಂ 11ರಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದು ಮಾಡಿರುವುದನ್ನು ಖಂಡಿಸಿ ಹಾಗೂ ಆಸ್ತಿ ಕಬಳಿಸುತ್ತಿರುವವರನ್ನು ವಿರೋಧಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ತಾಲೂಕು ವಿಶ್ವ ಹಿಂದು ಪರಿಷತ್, ಬಜರಂಗದಳ ಹಾಗೂ ರೈತರ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹೋರಾಟದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಅನ್ನದಾತರು ಹಾಗೂ ಮಠ ಮಂದಿರಗಳ ವಿರುದ್ಧ ಕಾಯ್ದೆ ಜಾರಿಗೆ ತಂದವರು ತಮ್ಮ ಸರ್ಕಾರವನ್ನು ಉಳಿಸಿಕೊಂಡಿರುವ ಉದಾಹರಣೆ ಇಲ್ಲ. ಆದರೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರೈತರು ಮತ್ತು ಮಠ ಮಂದಿರಗಳ ಆಸ್ತಿಯನ್ನು ಕಬಳಿಸುವ ಹುನ್ನಾರ ರಾಜ್ಯದಲ್ಲಿ ನಡೆದಿದೆ. ಹೀಗೆ ಮುಂದುವರಿದರೆ ನಿಮ್ಮ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದು ಹೇಳಿದರು.
ವಿಶ್ವ ಹಿಂದು ಪರಿಷತ್, ಬಜರಂಗದಳದ ತಾಲೂಕು ಅಧ್ಯಕ್ಷ ಮಹೇಶ ಸಾಲೋಡಗಿ, ಪಿ.ಕೆ.ಪಿ.ಎಸ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ಡಾ.ಬಸವರಾಜ ಚವ್ಹಾಣ, ವಿನೂತ ಕಲ್ಲೂರ ಮಾತನಾಡಿದರು.
ತಹಸೀಲ್ದಾರ್ ಕಚೇರಿ ಶಿರಸ್ತೇದಾರ ಎಂ.ಎಸ್ ಜಾಗೀದಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಅಶ್ವಿನಿ ಕುಮಾರ ಪಟ್ಟಣಶೆಟ್ಟಿ, ಬಸವರಾಜ ಬಿಜಾಪುರ, ವಿಠ್ಠಲ ರಜಪೂತ, ರಾಹುಲ್ ಜಗತಾಪ, ಮಹದೇವ ತಳವಾರ, ದಯಾನಂದ ಸಾರವಾಡ, ವಿಜಯ ಗುಡಿಮನಿ, ರಾಜು ಮುಳವಾಡ, ಪಿಂಟು ಕಾಮನಕೇರಿ, ಮಲ್ಲು ಅಥಣಿ, ಮುತ್ತುರಾಜ ಹಾಲಿಹಾಳ, ನಿಂಗು ಬಡಿಗೇರ, ಯಮನೂರಿ ಜಮಖಂಡಿ, ಮಣಿಕಂಠ ಕಲ್ಲೂರ, ದಾನೇಶ ಬಡಿಗೇರ, ಗೌಡಪ್ಪ ಬೋಶನೊರ, ಪ್ರದೀಪ ಮುಂಜಾನೆ, ಪೃಥ್ವಿರಾಜ ನಾಯ್ಕೋಡಿ, ಶ್ರೀಶೈಲ ಗಂಗೂರ, ಮಂಜುನಾಥ ಮಾವಡಿ, ದರ್ಶನ ಕೋಳೂರ, ಭಾಗ್ಯವಂತ ಇಂಗಳೇಶ್ವರ, ಸುರೇಶ ಗುಂಡಿ, ಅಪ್ಪು ಬೂತನಾಳ, ಡಿಂಗೂ ಅವರಸಂಗ, ಬಸವರಾಜ ಪತ್ತಾರ, ಗುಂಡಪ್ಪ ಜೀರ ಇತರರಿದ್ದರು.