ವಕ್ಫ್ ತಿದ್ದುಪಡಿ ಕಾಯ್ದೆ ಹಿಂಪಡೆಯಲಿ

dvd waqf Manavi
ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇವದುರ್ಗದಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸಿದರು. ಮುಖಂಡರಾದ ಜಹೀರ್ ಅಬ್ಬಾಸ್ ಹಫಿಸಾಬ್, ಮೈಬೂಬ್ ಮೌಲಾನಾ ಮುಕ್ತಿ, ಅಬ್ದುಲ್ ಅಜೀಜ್, ಎಕ್ಬಾಲ್ ಸಾಬ್ ಔದೊಡ್ಡಿ, ಮೈನುದ್ದೀನ್ ಡಿಜೆ ಇತರರಿದ್ದರು.
Published on

ದೇವದುರ್ಗ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿ ಪಟ್ಟಣದಲ್ಲಿ ಮುಸ್ಲಿಮರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.

ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಜಮಾವಣೆಗೊಂಡ ಸಾವಿರಾರು ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನಾ ರ‌್ಯಾಲಿ ನಡೆಸಿದರು.

ಜಹೀರುದ್ದೀನ್ ಪಾಷಾ ಸರ್ಕಲ್‌ನಿಂದ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಕಟಕರ ಕಟ್ಟೆ, ಮಹಾತ್ಮಗಾಂಧಿ ವೃತ್ತ, ಬಸವ ವೃತ್ತ, ಸಾರ್ವಜನಿಕ ಆಸ್ಪತ್ರೆ ರಸ್ತೆ ಮುಂಭಾಗದಿಂದ ತಾಲೂಕು ಆಡಳಿತಸೌಧವರೆಗೆ ರ‌್ಯಾಲಿ ನಡೆಸಿದರು.

ಕೇಂದ್ರ ಸರ್ಕಾರ ವಕ್ಪ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಮುಸ್ಲಿಮರ ಹಕ್ಕನ್ನು ಕಸಿದುಕೊಂಡಿದೆ. ಇದರಿಂದ ಮುಸ್ಲಿಮರಿಗೆ ವಕ್ಫ್ ಸೌಲಭ್ಯ ಮೊಟಕುಗೊಳ್ಳಲಿದ್ದು, ವಕ್ಫ್‌ನ ಆಸ್ತಿ ಸರ್ಕಾರದ ಪಾಲಾಗುವ ಆತಂಕವಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಲ್ಪಸಂಖ್ಯಾತರು, ಬಡವರು, ದಲಿತರ ಮೇಲೆ ಗದಾ ಪ್ರಹಾರ ನಡೆಸಿದೆ. ಕೂಡಲೇ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕು. ಈ ಹಿಂದೆ ಇದ್ದ ಕಾಯ್ದೆಯನ್ನೆ ಮುಂದುವರಿಸಬೇಕು. ನಿರ್ಲಕ್ಷೃ ಮಾಡಿದರೆ ದೇಶಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಮುಖಂಡರಾದ ಜಹೀರ್ ಅಬ್ಬಾಸ್ ಹಫಿಸಾಬ್, ಮೈಬೂಬ್ ಮೌಲಾನಾ ಮುಕ್ತಿ, ಅಬ್ದುಲ್ ಅಜೀಜ್, ಎಕ್ಬಾಲ್ ಸಾಬ್ ಔದೊಡ್ಡಿ, ಸಾಜೀದ್ ಶೇಠ್, ರಾಜ್ ಮಹಮ್ಮದ್ ತಾತ, ಶಬ್ಬೀರ್ ಅಹಮ್ಮದ್ ಔದೊಡ್ಡಿ, ಮೈನುದ್ದೀನ್ ಡಿಜೆ, ಅಬ್ಬಾಸ್ ಹುಸೇನಿ ಕಬಡ್ಡಿ, ಇಮ್ರಾನ್ ಕೆ.ಎಂ., ಅಮಿನ್‌ಸಾಬ್ ಗೌರಂಪೇಟೆ, ಬಾಷಾ ಕವಾಸ್, ಖಾಜಾ ಹುಸೇನ್, ಖಾಜಾಸಾಬ್ ಕರಿಗುಡ್ಡ, ಹುಸೇನ್, ಅಬ್ಬಾಸ್ ಹುಸೇನ್, ಖಲೀಮ್ ಖುರೇಷಿ, ಸೋಫಿಬಾಬ್ ಖುರೇಷಿ, ನಿಜಾಮುದ್ದೀನ್ ನಾಗುಂಡಿ, ಖಾದರ್ ಪಾಷಾ, ಉಮಾರ್ ಕಬಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net