ವಕ್ಫ್ ಬಗ್ಗೆ ಆತಂಕಪಡುವ ಅಗತ್ಯವಿಲ್ಲ

4BRG1
Published on

ಬೋರಗಾಂವ: ಪಟ್ಟಣದ ಸರ್ವೇ ನಂ.10ರ ಆರ್‌ಕೆ ನಗರ, ಇಂದಿರಾ ನಗರ ಹಾಗೂ ಠಿಕಣ ಬಡಾವಣೆ ಮನೆಗಳ ಆಸ್ತಿಯಲ್ಲಿ ವಕ್ಫ್ ಹೆಸರು ನಮೂದಾಗಿರುವ ಬಗ್ಗೆ ಯಾರು ಆತಂಕಪಡುವ ಅಗತ್ಯವಿಲ್ಲ. ಯಾರಿಗೂ ಅನ್ಯಾಯವಾಗದಂತೆ ಎಚ್ಚರ ವಹಿಸಲಾಗಿದೆ. ಈ ಕುರಿತು ಸಚಿವ ಸತೀಶ ಜಾರಕಿಹೊಳಿ ಹಾಗೂ ಹಲವು ಸಚಿವರ ಜತೆ ಚರ್ಚಿಸಿದ್ದೇನೆ. ಹಾಗಾಗಿ ಯಾರಿಗೂ ಅನ್ಯಾಯವಾಗುವುದಿಲ್ಲ. ಇನ್ನೆರಡು ದಿನಗಳಲ್ಲಿ ಆಸ್ತಿ ಮೊದಲಿನಂತಾಗಲಿವೆ ಎಂದು ಯುವ ಮುಖಂಡ ಉತ್ತಮ ಪಾಟೀಲ ಭರವಸೆ ನೀಡಿದರು.

ಪಟ್ಟಣದ ಆರ್‌ಕೆ ನಗರ, ಇಂದಿರಾ ನಗರದ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿರುವ ಹಿನ್ನಲೆಯಲ್ಲಿ ಬುಧವಾರ ತಹಸೀಲ್ದಾರ್ ಎಂ.ಎನ್. ಬಳಿಗಾರ ಪಟ್ಟಣಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಅವರು ಮಾತನಾಡಿ, ರಾಜ್ಯದ ಹಲವೆಡೆ ಇಂತಹ ಸಮಸ್ಯೆಗಳಿದ್ದು, ಹಂತ ಹಂತವಾಗಿ ಪರಿಹರಿಸಲಾಗುತ್ತಿದೆ. ಈ ಬಗ್ಗೆ ಯಾರೂ ಗೊಂದಲಕ್ಕೆ ಒಳಗಾಗಬಾರದು ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಪಿಂಟು ಕಾಂಬಳೆ, ಉಪಾಧ್ಯಕ್ಷೆ ಭಾರತಿ ವಾಸವಾಡೆ ಅವರವರ ಜಮೀನು ಅವರಿಗೆ ಸಿಗುವಂತೆ ಕ್ರಮ ವಹಿಸಬೇಕು ಎಂದು ಮನವಿ ನೀಡಿ ಒತ್ತಾಯಿಸಿದರು.

ಪಪಂ ಸದಸ್ಯ ಅಭಯಕುಮಾರ ಮಗದುಮ್ಮ, ದಿಗಂಬರ ಕಾಂಬಳೆ, ತುಳಸಿದಾಸ ವಾಸವಡೆ, ಸುವರ್ಣ ಸೋಬಾನೆ, ವರ್ಷಾ ಮನಗುತ್ತೆ, ಜಾವೇದ ಮಕಾಂದಾರ, ಪ್ರದೀಪ ಮಾಳಿ, ರೋಹಿತ ಪಾಟೀಲ, ಸಂಗೀತಾ ಶಿಂಗೆ, ಅಶ್ವಿನಿ ಪವಾರ, ಮಾಣಿಕ ಕುಂಬಾರ, ಗಿರಿಜಾ ವಠಾರೆ, ಶೋಭಾ ಹಾವ್ಲೆ, ರುಕ್ಸಾನಾ ಅ್ರಾಜ್, ಪಪಂ ಮುಖ್ಯಾಧಿಕಾರಿ ಎಸ್.ಬಿ. ತೋಡಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net