ಐದು ಮನೆಗಳ ಗೋಡೆ ಕುಸಿತ

24mnd1=
Published on

ಮುಂಡಗೋಡ: ಭಾನುವಾರ ತಾಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಗೆ ಐದು ಮನೆಗಳ ಗೋಡೆಗಳು ಕುಸಿದು ಬಿದ್ದು ಹಾನಿ ಸಂಭವಿಸಿದ ಘಟನೆ ಜರುಗಿದೆ. ತಾಲೂಕಿನ ಮಳಗಿ ಗ್ರಾಮ ಪಂಚಾಯಿತಿಯ ಇಂದಿರಾನಗರದಲ್ಲಿ ಎರಡು ಮನೆಗಳ ಗೋಡೆ ಕುಸಿದಿವೆ. ಗೊಟಗೋಡಿಕೊಪ್ಪದಲ್ಲಿ ಮೂರು ಮನೆಗಳ ಗೋಡೆ ಕುಸಿದಿವೆ. ಹುನಗುಂದ ಗ್ರಾಮದ ದಾದಾಪೀರ ಹುಬ್ಬಳ್ಳಿ, ನಜೀರಸಾಬ ಮುಲ್ಲಾನವರ, ಅಂಬವ್ವ ಮುಳೆ ಎಂಬವರ ಮನೆಯ ಗೋಡೆ ಕುಸಿದು ಬಿದ್ದಿವೆ. ಹುಲಿಹೊಂಡ ಗ್ರಾಮದ ರಾಜು ಸೊಪ್ಪಣ್ಣವರ, ಅರಶಿಣಗೇರಿ ಗ್ರಾಮದ ರಾಜು ಅಬ್ರಾಹಿಂ ಅವರ ಮನೆಯ ಗೋಡೆಗಳು ಮಳೆಗೆ ಕುಸಿದು ಬಿದ್ದು ಹಾನಿ ಸಂಭವಿಸಿವೆ ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪಂಚನಾಮೆ ಮಾಡಿದ್ದಾರೆ.

ದಾಖಲೆ ಮಳೆ: ಭಾನುವಾರ ತಾಲೂಕಿನಾದ್ಯಂತ 64.6ಮಿಮೀ ಮಳೆ ಸುರಿಯುವ ಮೂಲಕ ಈ ವರ್ಷ ಅತಿ ಹೆಚ್ಚು ಮಳೆ ಸುರಿದ ದಿನವಾಗಿದೆ. ಇಂದಿನವರೆಗೂ ತಾಲೂಕಿನಲ್ಲಿ 554.2 ಮಿಮೀ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net