ಪಂಪ್‌ವೆಲ್ ಮೇಲ್ಸೇತುವೆಯಲ್ಲಿ ಕಿಡಿಗೇಡಿಗಳ ಗೋಡೆ ಬರಹ

gode baraha
Published on

ಮಂಗಳೂರು: ನಗರದ ಪಂಪ್‌ವೆಲ್ ಮೇಲ್ಸೇತುವೆಯಲ್ಲಿ ಗೋಡೆ ಬರಹ ಕಾಣಿಸಿಕೊಂಡಿದ್ದು, ಕಿಡಿಗೇಡಿಗಳು ಬರೆದಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ.

‘ಲಾಕ್‌ಡೌನ್ ನೀಡೆಡ್’ ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ಅದರ ಬಳಿಯಲ್ಲೇ ‘ಬ್ಯಾಡ್ ಬಾಯ್ಸ ಇನ್ ದ ಸಿಟಿ’ ಹಾಗೂ ಅದರ ಮೇಲ್ಭಾಗದಲ್ಲಿ ಟೆಲ್ ಯುವರ್ ಮಾಮ್ ಬಾಸ್ಟರ್ಡ್ ಎಂದು ಬರೆಯಲಾಗಿದೆ. ಯಾರೋ ಕಿಡಿಗೇಡಿಗಳು ಬರೆದಿರುವ ಸಾಧ್ಯತೆ ಇದೆ. ಕರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಅವಶ್ಯವಿದೆ ಎಂದು ಬರೆದವರೇ ಇನ್ನೊಂದು ಬರಹ ಬರೆದಂತೆ ಕಂಡುಬರುತ್ತಿಲ್ಲ. ಅದನ್ನು ಬೇರೆ ತಂಡ ಬರೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲವು ಸಮಯದ ಹಿಂದೆ ಲಷ್ಕರ್ ಪರವಾಗಿ ಬಿಜೈ ಬಳಿ ಗೋಡೆ ಬರಹ ಪತ್ತೆಯಾಗಿ ಜಿಲ್ಲೆಯನ್ನು ತಲ್ಲಣಗೊಳಿಸಿತ್ತು. ಆ ಪ್ರಕರಣದಲ್ಲಿ ಮೂವರ ಬಂಧನವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net