ಗೋಡೆಬರಹ, ಇಬ್ಬರು ಅಪ್ರಾಪ್ತರ ಬಂಧನ

pumpwell new
Published on

ಮಂಗಳೂರು: ನಗರದ ಪಂಪ್‌ವೆಲ್ ಮೇಲ್ಸೇತುವೆಯ ಗೋಡೆ ಮೇಲೆ ಆಕ್ಷೇಪಾರ್ಹ ಹಾಗೂ ನಗರದ ಅಂದಗೆಡಿಸುವ ರೀತಿಯಲ್ಲಿ ಗೋಡೆಬರಹ ಚಿತ್ರಿಸಿದ ಇಬ್ಬರು ಕಾಲೇಜು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಲಾಕ್‌ಡೌನ್ ಬೇಕು, ಬ್ಯಾಡ್ ಬಾಯ್ಸ ಎಂದು ದೊಡ್ಡದಾಗಿ ಸ್ಪ್ರೇಪೈಂಟ್‌ನಲ್ಲಿ ಫ್ಲೈಓವರ್ ಮೇಲೆ ಇಬ್ಬರು ಅಪ್ರಾಪ್ತ ವಯಸ್ಕ ಬಾಲಕರು ಬರೆದಿದ್ದರು. ಇಬ್ಬರೂ ನಗರದ ಕಾಲೇಜೊಂದರ ವಿದ್ಯಾರ್ಥಿಗಳಾಗಿದ್ದು, ಲಾಕ್‌ಡೌನ್ ಆದರೆ ಪರೀಕ್ಷೆ ಮುಂದಕ್ಕೆ ಹಾಕುತ್ತಾರೆ ಎಂಬ ಕಾರಣಕ್ಕಾಗಿ ಈ ರೀತಿ ಬರೆದಿದ್ದರು ಎಂದು ಪೊಲೀಸರಿಗೆ ವಿಚಾರಣೆ ವೇಳೆ ತಿಳಿಸಿದ್ದಾರೆ.

ಸಿಸಿಟಿವಿ ಕ್ಯಾಮರಾ ಫೂಟೇಜ್ ನೀಡಿದ ಸುಳಿವಿನ ಆಧಾರದಲ್ಲಿ ಬಾಲಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಏ.20ರಂದು ಬೆಳಗ್ಗೆ ಈ ಗೋಡೆಬರಹ ಬರೆದಿರುವುದು ಪತ್ತೆಯಾಗಿತ್ತು. ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net