

ಹುಬ್ಬಳ್ಳಿಯ ನೃಪತುಂಗ ಬೆಟ್ಟದ ರಸ್ತೆ ಬದಿಯ ಗೋಡೆಗಳಿಗೆ ರೆವಲ್ಯೂಶನ್ ಮೈಂಡ್ಸ್ ವಿದ್ಯಾಥಿರ್ಗಳು ವೈವಿದ್ಯಮಯ ಚಿತ್ರಗಳನ್ನು ಬಿಡಿಸುವ ಮೂಲಕ ಆಕರ್ಷಕಗೊಳಿಸಿದ್ದಾರೆ.
ಹನಮಂತ ದೇವಸ್ಥಾನದಿಂದ ಮೇಲಿನವರೆಗೆ ಗೋಡೆಗಳಿಗೆ ಸುಂದರ ಚಿತ್ರಗಳನ್ನು ಬರೆಯಲು ಆರಂಭಿಸಿದ್ದು, ಈ ಭಾಗದ ಪಾಲಿಕೆ ಸದಸ್ಯೆ ಸೀಮಾ ಮೊಗಲಿಶೆಟ್ಟರ, ಸಾಮಾಜಿಕ ಕಾರ್ಯಕರ್ತ ಸಿದ್ದು ಮೊಗಲಿಶೆಟ್ಟರ ಸಹಯೋಗ ನೀಡಿದ್ದಾರೆ.
ಸ್ಥಳಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮುಖಂಡ ರವಿ ನಾಯಕ, ವಿನಾಯಕ ಗಾಂವಕರ, ಆರೋಗ್ಯ ಅಧಿಕಾರಿಗಳಾದ ರಾಜು ಕೊಲಗೊಂಡ, ತೌಸಿನ, ಹನಮಂತ ಶಿರಶ್ಯಾಳ, ಸುರೇಶ ಜಮಾದಾರ ಸಹಕಾರ ನೀಡಿದರು.