ಗೋಡೆ ಪತ್ರಿಕೆ ಎಲ್ಲೆಡೆ ಪಸರಿಸಲಿ: ಉಪನ್ಯಾಸಕ ಪ್ರಶಾಂತ ಹಾರೈಕೆ

HLK SCHOOLE 29 (1)
Published on

ಹೊಳಲ್ಕೆರೆ: ಶಾಲಾ ಮಕ್ಕಳು ಪ್ರತಿ ತಿಂಗಳು ಸ್ವತಃ ಕೈಬರಹದಲ್ಲಿ ಹೊರತರುತ್ತಿರುವ ಚಿಗುರು ಗೋಡೆ ಪತ್ರಿಕೆ ಇತರೆ ಶಾಲೆಗಳಲ್ಲೂ ಆರಂಭವಾಗಬೇಕು ಎಂದು ಚಿತ್ರದುರ್ಗ ಡಯಟ್ ಹಿರಿಯ ಉಪನ್ಯಾಸಕ ಪ್ರಶಾಂತ ಹೇಳಿದರು.

ಅಮೃತಾಪುರ ಸರ್ಕಾರಿ ಪ್ರಾಥಮಿಕ ಶಾಲೆಗೆ ಬುಧವಾರ ಭೇಟಿ ನೀಡಿ, ಮಕ್ಕಳು ಪ್ರದರ್ಶಿಸಿದ ಪ್ರಾಣಿಗಳ ನಿವೇದನೆ ರೂಪಕ ವೀಕ್ಷಿಸಿ ಮಾತನಾಡಿದರು.

ಮಕ್ಕಳ ಯೋಜನಾ ಕಾರ್ಯ, ಶಾಲಾ ಗ್ರಂಥಾಲಯ ಮತ್ತು ಪ್ರಯೋಗಾಲಯ ಮಾದರಿ ಆಗಿದ್ದು, ವಿದ್ಯಾರ್ಥಿಗಳ ಕೈಬರಹದ ಚಿಗುರು ಪತ್ರಿಕೆ ಬಹಳ ಒಳ್ಳೆಯ ಚಿಂತನೆ ಎಂದರು.

ಉಪನ್ಯಾಸಕ ಕೆ.ಬಸವರಾಜು ಮಾತನಾಡಿ, ಪಾಠಗಳ ಜತೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತರಬೇತುಗೊಳಿಸುವ ಶಿಕ್ಷಕರ ಬದ್ಧತೆ ಮಾದರಿ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಕ ಟಿ.ಉಮೇಶ್ ಮಾತನಾಡಿದರು.

ವಿದ್ಯಾರ್ಥಿಗಳು ಜಲದೇವತೆ ಕಿರು ನಾಟಕ ಪ್ರದರ್ಶಿಸಿ, ಇಂಗ್ಲಿಷ್ ಪದ್ಯಗಳ ಹಾಡು ಹೇಳಿ ಗಮನಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net