40 ಮನೆಗಳ ಗೋಡೆ ಕುಸಿತ

HLY GODE
Published on

ಹಳಿಯಾಳ: ಸತತ ಮಳೆಯಿಂದಾಗಿ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸೋಮವಾರ 40 ಮನೆಗಳ ಗೋಡೆ ಕುಸಿದಿದೆ. ಮೂರು ಜಾನುವಾರುಗಳು ಮೃತಪಟ್ಟಿವೆ.

ತಾಲೂಕಿನ ಬಂಟರಗಾಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಗೋಡೆ ಸಂಪೂರ್ಣ ಕುಸಿದಿದೆ. ಸ್ಥಳಕ್ಕೆ ತಹಸೀಲ್ದಾರ್ ಆರ್.ಎಚ್. ಭಾಗವಾನ ಹಾಗೂ ತಾಪಂ ಇಒ ಪರಶುರಾಮ ಘಸ್ತೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತಾಲೂಕಿನ ತೆರಗಾಂವ, ಬೆಳವಟಗಿ, ಕಾವಲವಾಡ, ರಾಮಾಪೂರ, ಮೊದಲಗೇರಾ, ಮುಂಡವಾಡ, ಕಾಳಗಿನಕೋಪ್ಪ, ಶಿವಪುರ ಗ್ರಾಮಗಳಲ್ಲಿ 38 ಹಾಗೂ ಹಳಿಯಾಳ ಪಟ್ಟಣದಲ್ಲಿ ಎರಡು ಮನೆಗಳ ಗೋಡೆಗಳು ಭಾಗಶಃ ಕುಸಿದಿವೆ.

ಬಾಳಶೆಟ್ಟಿಕೊಪ್ಪ ಗ್ರಾಮದ ಜನ್ನು ವಿಠ್ಠು ಎಡಗೆ ಅವರ ಎರಡು ಎಮ್ಮೆಗಳು ಸತ್ತಿವೆ. 75 ಸಾವಿರ ರೂಪಾಯಿ ಪರಿಹಾರ ಧನ ವಿತರಿಸಲಾಗಿದೆ. ಮಾವಿನಕೊಪ್ಪ ಗ್ರಾಮದ ಬಳಿ ನೀರಿನ ತೊರೆಯಲ್ಲಿ ಪಾರ್ವತಿ ಗಣಪತಿ ಕೋಳೆಕಾರ ಅವರ ಆಕಳು ಕೊಚ್ಚಿಕೊಂಡು ಹೋಗಿ ಮೃತಪಟ್ಟಿದೆ. 32 ಸಾವಿರ ರೂ ಪರಿಹಾರ ಧನ ನೀಡಲಾಗುವುದು. ಅಲ್ಲದೆ ಮನೆಗಳ ಗೋಡೆ ಕುಸಿದಿರುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net