ಜೋರು ಮಳೆಗೆ ವಿವಿಧೆಡೆ ಗೋಡೆ ಕುಸಿತ

Oplus_131072
ಯಳಂದೂರು ತಾಲೂಕಿನ ಉಪ್ಪಿನಮೋಳೆ ಗ್ರಾಮದ ಮನೆಯೊಂದರ ಗೋಡೆ ಮಳೆಯಿಂದ ಕುಸಿದಿರುವುದು.
Published on

ಯಳಂದೂರು: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಜೋರು ಮಳೆಗೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗೋಡೆ ಕುಸಿದು ಅಪಾರ ಪ್ರಮಾಣದ ಹಾನಿಯಾಗಿದೆ.

ತಾಲೂಕಿನ ಹೊನ್ನೂರು, ಉಪ್ಪಿನಮೋಳೆ, ಕೊಮಾರನಪುರ, ಅಂಬಳೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಳೆಯಿಂದ ಗೋಡೆ ಕುಸಿದಿದೆ. ಇದರಿಂದ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿಯಾಗಿದೆ. ಉಪ್ಪಿಮೋಳೆ ಗ್ರಾಮದ ಪುಟ್ಟಸಿದ್ದಮ್ಮ, ಅಂಬಳೆ ಗ್ರಾಮದ ಚರಣ್‌ರಾಜ್ ಹಾಗೂ ಹೊನ್ನೂರು ಗ್ರಾಮದ ಮಹದೇವಸ್ವಾಮಿ ಅವರಿಗೆ ಸೇರಿದ ಮನೆಯ ಗೋಡೆಗಳು ಕುಸಿದಿವೆ. ಅಲ್ಲದೆ ತಾಲೂಕಿನ ಕೊಮಾರನಪುರ ಗ್ರಾಮದಲ್ಲೂ ಮನೆಯ ಗೋಡೆ ಕುಸಿದಿದೆ. ಸ್ಥಳಕ್ಕೆ ಸಂಬಂಧಪಟ್ಟ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲಿಸಿ ಮುಂದಿನ ಕ್ರಮ ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net