ಮಳೆಯಿಂದ ಮನೆ ಕುಸಿತ

wall
Published on

ಕುಶಾಲನಗರ:

ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಕ್ಕೆ ಗ್ರಾಮದ ನಿವಾಸಿ ಮಲ್ಲಿಗೆ ಎಂಬವರ ಮನೆಯ ಗೋಡೆ ಅತಿಯಾದ ಮಳೆಯಿಂದಾಗಿ ಶನಿವಾರ ರಾತ್ರಿ ಕುಸಿತವಾಗಿದೆ. ಮಲ್ಲಿಗೆ ವಿಲಾಂಗಚೇತನ ಮಹಿಳೆಯಾಗಿದ್ದು, ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಒಂದು ಬದಿಯ ಗೋಡೆ ಕುಸಿದಿದೆ. ಅಪಾಯದ ಮುನ್ಸೂಚನೆ ಸಿಗುತ್ತಿದ್ದಂತೆಯೇ ಹೊರ ಬಂದಿದರಿAದಾಗಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯ ಸಾಮಾಗ್ರಿಗಳು ಹಾಳಾಗಿವೆ.

ಸ್ಧಳಕ್ಕೆ ಕುಶಾಲನಗರ ತಹಸೀಲ್ದಾರ್ ಕಿರಣ್ ಗೌರಯ್ಯ, ಕಂದಾಯ ಪರಿವೀಕ್ಷಣಾ ಅಧಿಕಾರಿ ಸಂತೋಷ್, ಗ್ರಾಮ ಅಡಳಿತ ಅಧಿಕಾರಿ ಫೀರ್ ಮಹಮ್ಮದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net