ಸವೆಯದ ಹಾದಿಯಲ್ಲಿ ಸಾಗುವುದು ಸುಲಭವಲ್ಲ

3
Published on

ಮೈಸೂರು: ಶೇಷನಾರಾಯಣ ಅವರಂತಹ ಅಲಕ್ಷಿತ ಸಾಹಿತಿಯನ್ನು ಗುರುತಿಸಿ ಅವರ ಬಾಲ್ಯದ ನೆನಹುಗಳನ್ನು ಪುಸ್ತಕ ರೂಪದಲ್ಲಿ ಹೊರ ತರುತ್ತಿರುವುದು ಶ್ಲಾಘನೀಯ ವಿಚಾರ ಎಂದು ನಿವತ್ತ ಪ್ರಾಧ್ಯಾಪಕ ಪ್ರೊ.ಎನ್.ಎಸ್. ತಾರಾನಾಥ ಹೇಳಿದರು.

ಮೈಸೂರು ವಿಶ್ವದ್ಯಾಲಯದ ಗ್ರಂಥಾಲಯ ಹಾಗೂ ಜಾನಪದ ಅಧ್ಯಯನ ವಿಭಾಗ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವತಿಯಿಂದ ಶನಿವಾರ ಮಾನಸಗಂಗೋತ್ರಿಯ ಗ್ರಂಥಾಲಯ ಸಭಾಂಗಣದಲ್ಲಿ ಆಯೋಜಿಸಿದ್ದ ‘ಶೇಷನಾರಾಯಣ ಅವರ ಬಾಲ್ಯದ ಕೆಲವು ನೆನಹುಗಳು’ ಎಂಬ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಶೋಧಕರು ಸವೆದ ಹಾದಿಯಲ್ಲಿ ಓಡಾಡುವುದು ಸಹಜ. ಆದರೆ ಸವೆಯದ ಹಾದಿಯಲ್ಲಿ ಸಾಗುವುದು ಹೊಸ ಅಧ್ಯಾಯವನ್ನು ಸೃಷ್ಟಿ ಮಾಡಿದಂತಾಗುತ್ತದೆ. ಅಲಕ್ಷಿತವಾದ ವಿಚಾರಗಳ ಮೇಲೆ ಸಂಶೋಧನೆ ಮಾಡಲು ಸಂಶೋಧನಾ ವಿದ್ಯಾರ್ಥಿಗಳು ಹಿಂಜರಿಯುವುದನ್ನು ಬಿಡಬೇಕು ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net