

ಹೊಳೆಹೊನ್ನೂರು: ಜೀವಿತಾವಽಯಲ್ಲಿ ಸಾರ್ಥಕ ಕೆಲಸ ಮಾಡುವವರನ್ನು ಸಮಾಜ ನೆನಪಿಸುತ್ತದೆ. ಕೆಲಸಗಳಲ್ಲಿ ಸಾರ್ಥಕತೆ ಕಾಣುವುದು ಸುಲಭದ ಮಾತಲ್ಲ. ಧರ್ಮ ಮಾರ್ಗದಲ್ಲಿ ನಡೆದು ಸಮಾಜಕ್ಕೆ ಕೊಡುಗೆ ನೀಡಿದರೆ ಅದೇ ಪುಣ್ಯದ ಕೆಲಸ. ಇದರಿಂದ ಜನಮಾನಸಗಳಲ್ಲಿ ಶಾಶ್ವತವಾಗಿ ನೆಲೆಯೂರಲು ಸಾಧ್ಯ ಎಂದು ಶಿವಮೊಗ್ಗ ಬೆಕ್ಕಿನಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದರು.
ಹೊಳಲೂರಿನ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ದಿ.ಎಂ.ಎಸ್ ಮಹೇಂದ್ರನಾಥ್ ನಿಧನ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ಆರ್ಶೀವಚನ ನೀಡಿ, ಮನುಷ್ಯನಿಗೆ ಮರೆವು ವರದಾನವಾದರೆ ಕೆಲವೊಮ್ಮೆ ಶಾಪವಾಗುತ್ತದೆ. ವ್ಯಕ್ತಿ ಮರೆಯುವುದನ್ನು ಮರೆಯದೆ ನೆನಪಿಟ್ಟುಕೊಂಡು ಕೊನೆಯವರೆಗೂ ಒದ್ದಾಡುವುದು ಸರಿಯಲ್ಲ ಎಂದರು.
ಜೀವನದಲ್ಲಿ ಎಲ್ಲರನ್ನೂ ಸಂಬಾಳಿಸುವುದು ಎಷ್ಟು ಕಷ್ಟವೋ ಸಾವಿನಲ್ಲಿ ಸಂತೃಪ್ತಿ ಸಾಽಸುವುದೂ ಅಷ್ಟೇ ಕಷ್ಟ. ಪ್ರತಿಯೊಬ್ಬರಿಗೂ ವಾಸ್ತವ ಸ್ಥಿತಿಯ ಅರಿವಿರಬೇಕು. ಪೂರ್ವ ನಿರ್ಧರಿತ ಸಾವಿಗೆ ಅಂಜದೆ ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಧರ್ಮ ಮಾರ್ಗದಲ್ಲಿ ನಡೆದು ಬದುಕು ಕಟ್ಟಿಕೊಳ್ಳಬೇಕು. ವ್ಯಕ್ತಿಯ ಗುಣ. ವಿಶೇಷಣಗಳು ಸಮಾಜದಲ್ಲಿ ಮನೆಮಾತಾಗಬೇಕು. ಪ್ರತಿಯೊಬ್ಬರೂ ತಮ್ಮ ಕಾಯಕ ನಿಷ್ಠೆಯನ್ನು ಮರೆಯಬಾರದು ಎಂದು ತಿಳಿಸಿದರು.
ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ್ ಅವರು ಮಾತನಾಡುವಾಗ ಆಪ್ತ ಸ್ನೇಹಿತ ಮಹೇಂದ್ರನಾಥ್ ಅವರ ನೆನೆದು ಸಭೆಯಲ್ಲಿ ಕಣ್ಣೀರು ಹಾಕಿದರು. ಬಳಿಕ ಸಭೆಯಲ್ಲಿದ್ದವರು ಅವರನ್ನು ಸಂತೈಸಿದರು. ಶಾಸಕಿ ಶಾರದಾ ಪರ‍್ಯಾನಾಯ್ಕ್, ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎಲ್.ಷಡಕ್ಷರಿ, ಎಂಎಲ್‌ಸಿ ಎಸ್.ರುದ್ರೇಗೌಡ, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಮಾಜಿ ಪ್ರಧಾನ ಕೆ.ಜಿ.ನಿಂಗಪ್ಪ, ಮುರುಗೇಂದ್ರ ಪಾಟೀಲ್, ಮೈಲಾರಪ್ಪ, ಕಲ್ಯಾಣಪ್ಪ, ಸಂತೋಷ್, ಽÃರರಾಜ್, ಹೇಮಾವತಿ, ಎಂ.ಲೋಹಿತ್, ಆಶಾ ಮಲ್ಲೇಶ್, ಎಂ.ವೀರಪ್ಪ, ಪಾಲಾಕ್ಷಪ್ಪ, ಎಚ್.ಪರಮೇಶ್ವರಪ್ಪ, ಎಂ.ಸಿ ಸುರೇಶ್ ಇತರರಿದ್ದರು.
ಜೀವನಾದರ್ಶಗಳಿಗೆ ಸಾವಿಲ್ಲ
ಬದುಕಿನಲ್ಲಿ ಸಾಮಾಜಿಕ ಕಳಕಳಿ ಹೊಂದಿದವರು ಸಾವಿನ ನಂತರವೂ ಜೀವಿಸುತ್ತಾರೆ. ಒಳ್ಳೆಯದು ಕೆಟ್ಟದ್ದನ್ನು ಯೋಚಿಸಿ ಧರ್ಮ ಮಾರ್ಗದಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂದು ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಜೀವಿಗೆ ಸಾವಿದೆಯೇ ಹೊರೆತು ಜೀವನಾದರ್ಶಗಳಿಗೆ ಸಾವಿಲ್ಲ. ಪಾಲಕರು ವೃದ್ಧಾಶ್ರಮ ಪಾಲಾಗುವುದು ನಿಲ್ಲಬೇಕು. ಬದುಕಿದ್ದಾಗ ವೃದ್ಧ ಪಾಲಕರ ಶುಶ್ರೂಷೆ ಮಾಡದವರು ಮೃತರ ಫೋಟೋಗಳಿಗೆ ಹೋಳಿಗೆ ತುಪ್ಪ ನೈವೇದ್ಯ ಮಾಡಿದರೇನು ಪ್ರಯೋಜನ ಎಂದು ಹೇಳಿದರು.