ಕ್ಯಾನ್ಸರ್ ರೋಗ ನಿರ್ಮೂಲನೆಗೆ ವಾಕಥಾನ್

h18-cancer
Published on

ಹುಬ್ಬಳ್ಳಿ: ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಸೆಂಟರ್ ವತಿಯಿಂದ ನಗರದಲ್ಲಿ ಕ್ಯಾನ್ಸರ್ ರೋಗದ ಕುರಿತು ಜಾಗೃತಿ ಮೂಡಿಸಲು ಭಾನುವಾರ ವಾಕಥಾನ್ ನಡೆಸಲಾಯಿತು.
ಕಿಮ್ಸ್ ಮುಖ್ಯದ್ವಾರದಿಂದ ಆರಂಭವಾದ ವಾಕಥಾನ್, ಉಣಕಲ್ ಕೆರೆ ಉದ್ಯಾನದ ಮುಂಭಾಗದಲ್ಲಿ ಕೊನೆಗೊಂಡಿತು. ದೇಶಪಾಂಡೆ ಫೌಂಡೇಷನ್ ಹಾಗೂ ವ್ನಿೇಶ್ವರ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳು ವಾಕಥಾನ್‌ನಲ್ಲಿ ಭಾಗವಹಿಸಿದ್ದರು.
ಕರ್ನಾಟಕ ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಜಿಸ್ ಲಿಮಿಟೆಡ್‌ನ ಪ್ರಾದೇಶಿಕ ಮುಖ್ಯ
ಕಾರ್ಯನಿರ್ವಹಣಾಧಿಕಾರಿ ಮನೀಶಾ ಕುಮಾರ ಮಾತನಾಡಿ, ಕ್ಯಾನ್ಸರ್ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪ್ರಾರಂಭಿಕ ಹಂತದಲ್ಲಿ ಪತ್ತೆಯಾದರೆ ರೋಗ ನಿರ್ಮೂಲನೆ ಸಾಧ್ಯ. ರೋಗಿಯ ಆರೈಕೆ ಜತೆಗೆ ಮಾನಸಿಕ ಬಲ ತುಂಬಬೇಕು. ನಿಮ್ಮೊಂದಿಗೆ ನಾವಿದ್ದೇವೆ ಎಂಬ ವಿಶ್ವಾಸ ತೋರಬೇಕು ಎಂದರು.
ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಸೆಂಟರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಅಬ್ದುಲ್ ಮಾತನಾಡಿ, ಆರೋಗ್ಯದ ಬಗ್ಗೆ ಎಲ್ಲರೂ ಕಾಳಜಿ ತೋರಬೇಕು. ಕ್ಯಾನ್ಸರ್ ರೋಗ ತಡೆಯಲು ನಾವೆಲ್ಲರೂ ಶಪಥ ಮಾಡಬೇಕು ಎಂದರು.
ದೇಶಪಾಂಡೆ ಫೌಂಡೇಷನ್‌ನ ಸಿಇಒ ಪಿ.ಎನ್. ನಾಯಕ್, ಉಪ ನಿರ್ದೇಶಕ ರಾಜಬ್ಲಿ ಎಂ., ಎಸಿಪಿ ವಿನೋದ ಮುಕ್ತೇದಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net