ವಾಕಥಾನ್ ಸೆ. 7ರಂದು

h6-Tarancharan Sahu
Published on

ಹುಬ್ಬಳ್ಳಿ: ಬ್ಯಾಂಕ್ ಆಫ್ ಇಂಡಿಯಾ 120ನೇ ಸಂಸ್ಥಾಪನಾ ದಿನ ನಿಮಿತ್ತ ಸೆ. 7ರಂದು ಬೆಳಗ್ಗೆ 7ಗಂಟೆಗೆ ನಗರದಲ್ಲಿ ವಾಕಥಾನ್ ಏರ್ಪಡಿಸಲಾಗಿದೆ ಎಂದು ಬ್ಯಾಂಕ್‌ನ ವಲಯ ವ್ಯವಸ್ಥಾಪಕ ತರಿಣಿ ಚರಣಸಾಹು ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 7ಕ್ಕೆ ಗೋಕುಲ ರಸ್ತೆಯ ಬಸವೇಶ್ವರ ನಗರ ವೃತ್ತದಲ್ಲಿ ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ವಾಕಥಾನ್‌ಗೆ ಚಾಲನೆ ನೀಡುವರು.

ವಾಕಥಾನ್ ಫಾರ್ಚೂನ್ ಹೋಟೆಲ್ ಮಾರ್ಗವಾಗಿ ಮಂಜುನಾಥ ನಗರ ಕ್ರಾಸ್, ಅಕ್ಷಯ ಪಾರ್ಕ್ ಮೂಲಕ ಮರಳಿ ಬಸವೇಶ್ವರ ವೃತ್ತ ತಲುಪಲಿದೆ. ವಾಕಥಾನ್ 5 ಕಿ.ಮೀ. ಇರಲಿದೆ. 400 ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಬ್ಯಾಂಕ್ ದೇಶಾದ್ಯಂತ 5300 ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ವಿದೇಶದಲ್ಲಿ 47 ಶಾಖೆ ಹೊಂದಿದ್ದು, 15 ಲಕ್ಷ ಕೋಟಿಗೂ ಅಧಿಕ ವ್ಯವಹಾರ ನಡೆಸುತ್ತಿದೆ ಎಂದರು.

ಉಪ ವಲಯ ವ್ಯವಸ್ಥಾಪಕ ಅಭಿನವ ಪಾಂಡೆ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net