ವಾಕಥಾನ್​ 29ರಂದು

26 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಶ್ವ ಹೃದಯ ದಿನ ನಿಮಿತ್ತ ನಗರದ ಎಸ್​ಡಿಎಂ ನಾರಾಯಣ ಹಾರ್ಟ್​ ಸೆಂಟರ್​ ವತಿಯಿಂದ ಸೆ. 29ರಂದು ವಾಕಥಾನ್​ (ಕಾಲ್ನಡಿಗೆ ಜಾಥಾ) ಏರ್ಪಡಿಸಲಾಗಿದೆ ಎಂದು ಹಾರ್ಟ್​ ಸೆಂಟರ್​ನ ವ್ಯವಸ್ಥಾಪಕ ನಿರ್ದೇಶಕ ಶಶಿಕುಮಾರ ಪಟ್ಟಣಶೆಟ್ಟಿ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯಕರ ಹೃದಯ ಧೀರ್ಘ ಕಾಲ ನಡೆಯುತ್ತದೆ ಎಂಬ ಶೀರ್ಷಿಕೆ ಅಡಿ ಅಂದು ಬೆಳಗ್ಗೆ 6.30ಕ್ಕೆ ಕೆಸಿಡಿ ಕಾಲೇಜಿನ ಮುಖ್ಯ ದ್ವಾರದಿಂದ ಜಾಥಾ ಆರಂಭವಾಗಲಿದೆ. ಅತಿಥಿಗಳಾಗಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಹೆಚ್ಚುವರಿ ಪೊಲೀಸ್​ ಅಧೀಕ್ಷಕ ನಾರಾಯಣ ಭರಮನಿ, ಎಸಿಪಿ ಪ್ರಶಾಂತ ಸಿದ್ದನಗೌಡರ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ, ಆಗಮಿಸಲಿದ್ದಾರೆ ಎಂದರು.
ಬಳಿಕ ಕಾಲೇಜು ರಸ್ತೆ, ಜುಬಿಲಿ ವೃತ್ತ, ಕೋರ್ಟ್​ ವೃತ್ತ, ಜಿಲ್ಲಾಧಿಕಾರಿ ಕಚೇರಿ, ಹಿಂದಿ ಪ್ರಚಾರ ಸಭಾ ಮಾರ್ಗವಾಗಿ ಸೃಜನಾ ರಂಗ ಮಂದಿರ ಬಳಿ ಸಮಾರೋಪಗೊಳ್ಳಲಿದೆ. ಸುಮಾರು 3 ಕಿ.ಮೀ ವಾಕಥಾನ್​ನಲ್ಲಿ ನಾರಾಯಣ ಹಾರ್ಟ್​ ಸೆಂಟರ್​ ಸಿಬ್ಬಂದಿ ಸೇರಿ 500ಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಕಾಲ್ನಡಿಗೆಯಿಂದ ಹೃದಯ ಆರೋಗ್ಯದ ಮೇಲೆ ಬೀರುವ ಪೂರಕ ಪರಿಣಾಮಗಳನ್ನು ತಿಳಿಸುವುದೇ ಜಾಥಾ ಮುಖ್ಯ ಉದ್ದೇಶ. ನಾರಾಯಣ ಹಾರ್ಟ್​ ಸೆಂಟರ್​ ಹೃದಯ ಆರೈಕೆ ಮತ್ತು ಹೃದಯ ಶಸ್ತ್ರ ಚಿಕಿತ್ಸೆಗೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆಯಾಗಿದೆ. ಹೃದಯಕ್ಕೆ ಸಂಬಂಧಿಸಿದ ತುರ್ತು ಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದೆ ಎಂದರು.
ಅಜೇಯ ಹುಲಮನಿ, ದುಂಡೇಶ ತಡಕೋಡ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net