

ಮೈಸೂರು ಕೀಲು, ಮೂಳೆ ತಜ್ಞರ ಸಂಘದ ವತಿಯಿಂದ ಆ.4ರಂದು ನಗರದಲ್ಲಿ ರಾಷ್ಟ್ರೀಯ ಕೀಲು ಮೂಳೆ ದಿನಾಚರಣೆ ಪ್ರಯುಕ್ತ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ನಗರದ ಶಾರದಾ ಪಬ್ಲಿಕ್ ಶಾಲೆ ಮತ್ತು ಪುಷ್ಕರಿಣಿ ಶಾಲೆಯ ಮಕ್ಕಳಿಗೆ ಜೀವ ರಕ್ಷಕ ಮೂಲ ಕೌಶಲ ತರಬೇತಿ, ಆ.6ರಂದು ಮೂಳೆ ಸಾಂದ್ರತೆ ಕಡಿಮೆ ಮಾಡುವ ಆಸ್ಟಿಯೊಪೊರೋಸಿಸ್ ಕಾಯಿಲೆ ಬಗ್ಗೆ ಅರಿವು ಮೂಡಿಸಲು ನಗರದ ಮಹಾರಾಜ ಕಾಲೇಜು ಮೈದಾನದಿಂದ ಸುಮಾರು 3.5 ಕಿ.ಮೀ. ದೂರದ ವಾಕಥಾನ್ ನಡೆಯಲಿವೆ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಚಾಲನೆ ನೀಡುವರು. ನಗರದ ಎಲ್ಲ ಕೀಲು ಮೂಳೆ ತಜ್ಞರು ಹಾಗೂ ಹಲವು ಆಸ್ಪತ್ರೆಗಳ ಸಿಬ್ಬಂದಿ ಭಾಗವಹಿಸುವರು ಎಂದು ಆಯೋಜಕ ಡಾ.ರಘುನಂದನ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯದರ್ಶಿ ಡಾ.ಶ್ರೇಯಸ್ ಆಳ್ವ ಹಾಜರಿದ್ದರು.