

ಹುಬ್ಬಳ್ಳಿ: ವಿಶ್ವ ಹೃದ್ರೋಗ ದಿನ ನಿಮಿತ್ತ ಹೃದ್ರೋಗ ವಿಭಾಗದಿಂದ ಇಲ್ಲಿಯ ಕೆಎಂಸಿಆರ್‌ಐನಲ್ಲಿ ಸೋಮವಾರ ವಾಕಥಾನ್ ಏರ್ಪಡಿಸಲಾಗಿತ್ತು.
ವಾಕಥಾನ್‌ಗೆ ಚಾಲನೆ ನೀಡಿ ಮಾತನಾಡಿದ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ರಾಜಕುಮಾರ ಹಿರೇಮಠ, ನಿತ್ಯವೂ ಸರಿಯಾದ ಸಮಯಕ್ಕೆ ಹಾಗೂ ಪೌಷ್ಟಿಕತೆಯುಳ್ಳ ಆಹಾರ ಸೇವನೆ ಮಾಡಬೇಕು. ನಿದ್ದೆಯಲ್ಲಿ ವ್ಯತ್ಯಾಸವಾಗಬಾರದು. ಪ್ರತಿ ದಿನ ವ್ಯಾಯಾಮ ಮಾಡಬೇಕು. ಈ ಮೂರು ಕ್ರಿಯೆಗಳನ್ನು ಸರಿಯಾಗಿಟ್ಟುಕೊಂಡರೆ, ನಮ್ಮ ಹೃದಯ ಚೆನ್ನಾಗಿರುತ್ತದೆ. ಇಲ್ಲವಾದರೆ, ಹೃದಯದ ಆರೋಗ್ಯವನ್ನು ನಾವೇ ಕೆಡಿಸಿದಂತಾಗುತ್ತದೆ ಎಂದು ತಿಳಿವಳಿಕೆ ನೀಡಿದರು.
ಹೃದ್ರೋಗ ತಜ್ಞ ಡಾ. ಉಮೇಶ ಬೀಳಗಿ ಮಾತನಾಡಿ, ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ಕೆಲ ಟಿಪ್ಸ್‌ಗಳನ್ನು ನೀಡಿದರು. ಡಾ.ಕೆ.ಎಫ್. ಕಮ್ಮಾರ ಇತರರು ಇದ್ದರು.