ವಿಶ್ವ ಶ್ರವಣ ದಿನದ ಅಂಗವಾಗಿ ‘ವಾಕಥಾನ್’

35
Published on

ಮೈಸೂರು: ವಿಶ್ವ ಶ್ರವಣ ದಿನದ ಅಂಗವಾಗಿ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಎಐಐಎಸ್‌ಎಚ್), ಜೆಎಸ್‌ಎಸ್ ವಾಕ್ ಮತ್ತು ಶ್ರವಣ ಸಂಸ್ಥೆ (ಜೆಎಸ್‌ಎಸ್‌ಐಎಸ್‌ಎಚ್) ಮತ್ತು ಭಾರತೀಯ ವಾಕ್ ಮತ್ತು ಶ್ರವಣ ಅಸೋಸಿಯೇಷನ್ (ಐಎಸ್‌ಎಚ್‌ಎ) ಮೈಸೂರು ವಿಭಾಗದ ವತಿಯಿಂದ ಭಾನುವಾರ ‘ವಾಕಥಾನ್’ ನಡೆಯಿತು.

ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದ ಮುಂಭಾಗದಿಂದ ಆರಂಭಗೊಂಡ ವಾಕಥಾನ್ ನಗರದ ನಾನಾ ಭಾಗದಲ್ಲಿ ಸಂಚರಿಸಿತು. ಆಯಿಷ್ ಮತ್ತು ಜೆಎಸ್‌ಎಸ್ ವಾಕ್ ಮತ್ತು ಶ್ರವಣ ಸಂಸ್ಥೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸೇರಿದಂತೆ 300ಕ್ಕೂ ಹೆಚ್ಚು ಜನ ‘ವಾಕಥಾನ್’ನಲ್ಲಿ ಭಾಗವಹಿಸಿ ‘ಶ್ರವಣ ಆರೋಗ್ಯ’ದ ಬಗ್ಗೆ ಅರಿವು ಮೂಡಿಸಿದರು.

‘ಶ್ರವಣ ಆರೋಗ್ಯ ನಮ್ಮ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶ್ರವಣ ದೋಷ ಮತ್ತು ಶಬ್ದ ಮಾಲಿನ್ಯದ ದುಷ್ಪರಿಣಾಮಗಳಿಂದ ಉಂಟಾಗುವ ಶ್ರವಣ ಸಂಬಂಧಿತ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಅರಿವು ಮೂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net