

ಚಿಕ್ಕೋಡಿ: ಆಸೆ-ಆಮಿಷಗಳಿಗೆ ಒಳಗಾಗದೆ ಬಸವಾದಿ ಶಿವಶರಣರ ವಚನಗಳ ಸಾರ ಅರಿಯಬೇಕು. ಕಾಯಕದಿಂದ ದಾಸೋಹ ಮಾಡಿ ಸಂತೃಪ್ತಿಯಿಂದ ಜೀವನ ಸಾಗಿಸಬೇಕು ಎಂದು ಓಂಕಾರ ಆಶ್ರಮದ ಭ್ರಮರಾಂಬಿಕಾದೇವಿ ಹೇಳಿದರು.
ಧುಳಗನವಾಡಿ ಗ್ರಾಮದ ಸದ್ಗುರು ಶರಣರ ಕಲಾಸೇವಾ ಮಂಡಳ ಹಾಗೂ ಖೋತ ಪರಿವಾರದ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಾಸಿಕ ೧೦೯ನೇ ಸುವಿಚಾರ ಚಿಂತನಗೋಷ್ಠಿ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಿವೃತ್ತ ಪಿಡಿಒ ಮಹಾದೇವ ಬಾಕರೆ ದಂಪತಿಯನ್ನು ಸನ್ಮಾನಿಸಲಾಯಿತು.
ಶರಣ ಧನಪಾಲ ಕಮತೆ ಮಾತನಾಡಿದರು. ಅಪ್ಪಾಸಾಹೇಬ ಖೋತ, ಭರತ ಕಲಾಚಂದ್ರ, ಮಾರುತಿ ಚಿಮಣೆ, ವಿಜಯ ವಾಘಮಾರೆ, ಶಶಿಕಾಂತ ಜಂಗಿ ಇತರರಿದ್ದರು. ಓಂಕಾರ ಖೋತ ಸ್ವಾಗತಿಸಿದರು. ಸುಪ್ರಿಯಾ ಕಲಾಚಂದ್ರ ನಿರೂಪಿಸಿದರು. ಸುಜಾತಾ ಮಗದುಮ್ಮ ವಂದಿಸಿದರು.