

ಹುಬ್ಬಳ್ಳಿ: ಇಲ್ಲಿಯ ಹುಬ್ಬಳ್ಳಿ ಕೋ ಆಪರೇಟಿವ್ ಆಸ್ಪತ್ರೆ ಹಾಗೂ ಕೆಎಲ್ಇ ಜೆಜಿಎಂಎಂ ಮೆಡಿಕಲ್ ಕಾಲೇಜಿನ ಸಹಯೋಗದೊಂದಿಗೆ 40ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕೋತ್ಸವ ಅಂಗವಾಗಿ ದೃಷ್ಟಿಗಾಗಿ ನಡಿಗೆ ಜಾಥಾ ಏರ್ಪಡಿಸಲಾಗಿತ್ತು.
ಹುಬ್ಬಳ್ಳಿ ಕೋ ಆಪರೇಟಿವ್ ಆಸ್ಪತ್ರೆಯಿಂದ ಹೊರಟ ಜಾಥಾಕ್ಕೆ ಸಂಸ್ಥೆಯ ಗೌರವ ಕಾರ್ಯದರ್ಶಿ ಲಿಂಗರಾಜ ಪಾಟೀಲ ಚಾಲನೆ ನೀಡಿದರು.
ಸಂಸ್ಥೆಯ ಜಂಟಿ ಕಾರ್ಯದರ್ಶಿಗಳಾದ ಪುಂಡಲೀಕ ಅಪ್ಪಿನಬೈಲ್, ಮೋಹನ ಕೋಟೆಕರ, ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ವೈ.ಎಫ್. ಹಂಜಿ, ಕಣ್ಣಿನ ವೈದ್ಯರಾದ ಡಾ. ಮೇಘನಾ ಪಾಟೀಲ, ಡಾ. ಶಿಲ್ಪಾ ಬಳಿಗಾರ, ಡಾ. ಲಕ್ಷ್ಮಿ ಗುಮಾಸ್ತೆ, ನಸಿರ್ಂಗ್ ಇನ್ ಸ್ಟಿಟ್ಯೂಟ್ ಪ್ರಾಂಶುಪಾಲ ಪದ್ಮಶ್ರೀ ಮುರಗೋಡ, ದೀಪಕ ಜಿತೂರಿ, ಸಿಬ್ಬಂದಿ ಉಪಸ್ಥಿತರಿದ್ದರು.