ಸಂವಿಧಾನದ ಆಶಯ ಅರಿತು ನಡೆಯಿರಿ

jkd jatha
ಜಮಖಂಡಿ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ತಾಪಂ ಇಒ ಸಂಜೀವ ಜಿನ್ನೂರ, ಬಿಇಒ ಅಶೋಕ ಬಸಣ್ಣವರ ಇತರರಿದ್ದರು.
Published on

ಜಮಖಂಡಿ: ನಮ್ಮ ದೇಶ ಸುಭದ್ರ ಹಾಗೂ ಸಮೃದ್ಧಿಯಾಗಿ ಬೆಳೆಯಲು ಮೂಲ ಆಧಾರ ಸ್ಥಂಭ ಸಂವಿಧಾನ, ಸಂವಿಧಾನದ ಆಶಯಗಳನ್ನು ಅರಿತು ಅನುಸರಿಸಿಕೊಂಡು ನಡೆಯಬೇಕು ಎಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಹೇಳಿದರು.

ತಾಲೂಕಿನ ಕೊಣ್ಣೂರ ಮತ್ತು ಲಿಂಗನೂರ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸಂವಿಧಾನ ಪ್ರತಿಯೊಬ್ಬರನ್ನು ಸಮಾನವಾಗಿ ನೋಡುತ್ತದೆ. ಪ್ರತಿಯೊಬ್ಬರಿಗೂ ಅವಕಾಶಗಳನ್ನು ನೀಡಿದೆ. ಅರ್ಹತೆ ಆಧಾರದ ಮೇಲೆ ನೀವು ಸಾಧನೆ ಮಾಡಬೇಕು ಎಂದರು.

ತಾಪಂ ಇಒ ಸಂಜೀವ ಜಿನ್ನೂರ ಮಾತನಾಡಿ, ಸಂವಿಧಾನ ಎಂತಹ ಪದಗಳಿಂದ ತಯಾರಾಗಿದೆ ಎಂಬುದಕ್ಕಿಂತ ಅದನ್ನು ಬಳಕೆಮಾಡಿಕೊಳ್ಳುವವರು ಗುಣವಂತರಿದ್ದರೆ ಶ್ರೇಷ್ಠ ಸಂವಿಧಾನವಾಗುತ್ತದೆ. ಕೆಟ್ಟವರಾದರೆ ಅಸಮರ್ಥವಾಗುತ್ತದೆ ಎಂದು ಅಂಬೇಡ್ಕರ್ ಹೇಳಿದ್ದಾರೆ. ಆದ್ದರಿಂದ ನಾವು ಶ್ರೇಷ್ಠ ಸಂವಿಧಾನ ಮಾಡಿ ತೋರಿಸಿದಾಗ ಮಾತ್ರ ಸಂವಿಧಾನಕ್ಕೆ ಗೌರವ ನೀಡಿದಂತಾಗುತ್ತದೆ. ವಿವಿಧ ದೇಶದ ಸಂವಿಧಾನವನ್ನು ಓದಿ ಅರ್ಥೈಸಿಕೊಂಡು ಜೇನುಹುಳು ಹೂವಿನ ಮಕರಂಧವನ್ನು ತಂದು ಸಿಹಿ ಜೇನು ತಯಾರಿಸಿದಂತೆ ಅಂಬೇಡ್ಕರ್ ಭಾರತಕ್ಕೆ ಸಂವಿಧಾನ ನೀಡಿದ್ದಾರೆ ಎಂದು ಹೇಳಿದರು.

ಮಕ್ಕಳಿಗೆ ಪ್ರಬಂಧ, ರಂಗೋಲಿ, ಭಾಷಣ ಸೇರಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದರೆ, ಸ್ಪರ್ಧೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ವಾಧ್ಯಮೇಳಗಳೊಂದಿಗೆ ಸಂವಿಧಾನ ಜಾಗೃತಿ ಜಾಥಾ ಸಂಚರಿಸಿತು. ವಿದ್ಯಾರ್ಥಿಗಳು, ಕುಂಭಹೊತ್ತ ಮಹಿಳೆಯರು ಮೆರವಣಿಗೆಗೆ ಮೆರಗು ನೀಡಿದರು. ಮರೆಗುದ್ದಿ, ಹುಲ್ಯಾಳ, ಸಿದ್ದಾಪೂರ ಗ್ರಾಪಂನಲ್ಲಿ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.

ಬಿಇಒ ಅಶೋಕ ಬಸಣ್ಣವರ ಸಂವಿಧಾನದ ಪೀಠಿಕೆ ವಾಚಿಸಿದರು.

ಸಮಾಜಕಲ್ಯಾಣ ಇಲಾಖೆ ಸಿ.ಎಸ್. ಗಡದೇವರಮಠ, ತಾಲೂಕು ವೈದ್ಯಾಧಿಕಾರಿ ಡಾ. ಜಿ.ಎಸ್. ಗಲಗಲಿ, ಬಿಸಿಎಂ ಇಲಾಖೆಯ ರಾಮಲಿಂಗ ಬೈರವಾಡಿ, ಅಲ್ಪಸಂಖ್ಯಾತ ಇಲಾಖೆ ಸಂತೋಷ ಬಾಡಗಿ, ನ್ಯಾಯವಾದಿ ನಿಂಗಪ್ಪ ಗಸ್ತಿ, ಲಿಂಗನೂರ ಗ್ರಾಪಂ ಅಧ್ಯಕ್ಷೆ ಮಹಾದೇವಿ ಕರಿಗಾರ, ಕೊಣ್ಣೂರ ಗ್ರಾಪಂ ಅಧ್ಯಕ್ಷೆ ಸರಸ್ವತಿ ನರಸಪ್ಪನವರ, ಪಿಡಿಒ ಎಸ್.ಆರ್. ಬಿರಾದಾರ, ಸಿದ್ದು ಎಣ್ಣಿ, ಕರೆಪ್ಪ ಹುಣಸಿಕಟ್ಟಿ, ಕೆ.ಎಸ್. ಅಗಸನವರ, ಹೂವಪ್ಪ ಉಷಾಕರ, ವಿಶಾಲ ಧರಿಯಪ್ಪಗೋಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net