

ಮಂಗಳೂರು: ಚೆನ್ನೈನ ಬೋರ್ಡ್ ಆ್ ಅಪ್ರಂಟೀಸ್‌ಶಿಪ್ ಟ್ರೈನಿಂಗ್ (ದಕ್ಷಿಣ ವಲಯ), ಬೆಂಗಳೂರಿನ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಮತ್ತು ಸಹ್ಯಾದ್ರಿ ಕಾಲೇಜ್ ಆ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಸಹಯೋಗದಲ್ಲಿ ಮಂಗಳೂರು ಅಡ್ಯಾರ್‌ನ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಆಗಸ್ಟ್ 6ರಂದು ಬೆಳಗ್ಗೆ 8.30ರಿಂದ ಇಂಜಿನಿಯರಿಂಗ್, ಡಿಪ್ಲೊಮಾ ಮತ್ತು ಪದವೀಧರರಿಗೆ ‘‘ವಾಕ್ ಇನ್ ಇಂಟರ್ವ್ಯೂ’’ ನಡೆಯಲಿದೆ.
ಪದವಿ, ಇಂಜಿನಿಯರಿಂಗ್ ಮತ್ತು ಡಿಪ್ಲೊಮಾ ಹೊಂದಿರುವವರಿಗೆ ಪ್ರಾಯೋಗಿಕ ತರಬೇತಿ ನೀಡುವ ಉದ್ದೇಶದಿಂದ ‘ ಪ್ರ್ಯಾಕ್ಟಿಕಲ್ ಟ್ರೈನಿಂಗ್ ಸ್ಟೈೆಂಡಿಯರಿ ಯೋಜನೆಯನ್ನು ಪ್ರಾರಂಭಿಸಿದೆ. ಚೆನ್ನೈನ ಬೋರ್ಡ್ ಆಫ್ ಅಪ್ರಂಟೀಸ್‌ಶಿಪ್ ಟ್ರೈನಿಂಗ್‌ನ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಸ್.ಇಂಜಗನೇರಿ ತಿಳಿಸಿದರು.
ಪ್ಲೇಸ್‌ಮೆಂಟ್ ಮತ್ತು ಟ್ರೈನಿಂಗ್ ವಿಭಾಗದ ಡೀನ್ ಪ್ರೊ.ರಶ್ಮಿ ಭಂಡಾರಿ ಅವರು ಮಾತನಾಡಿ, ಐದು ವರ್ಷಗಳಿಂದ ಅಂದರೆ 2020-2024 ವರೆಗೆ ಉತ್ತೀರ್ಣರಾದವರು ತರಬೇತಿ ಸಂದರ್ಶನದಲ್ಲಿ ಭಾಗವಹಿಸಬಹುದು. ಯಾವುದೇ ನೋಂದಣಿ ಶುಲ್ಕ ಇರುವುದಿಲ್ಲ. ವಿದ್ಯಾರ್ಥಿಗಳು NATS (https://nats.education.gov.in) ಪೋರ್ಟಲ್‌ಗೆ ಲಾಗಿನ್ ಆಗಿ ಅದರ ದಾಖಲಾಗಿ ಫಾರ್ಮ್ ಅನ್ನು ಸಂದರ್ಶನದ ವೇಳೆ ತರಬೇಕು. ಎಂಆರ್‌ಪಿಎಲ್, ಎಚ್‌ಎಂಟಿ ವಿವಿಧ 30ಕ್ಕೂ ಅಧಿಕ ಸಂಸ್ಥೆಗಳು ಭಾಗವಹಿಸಲಿವೆ. ಕೆಲವು ಸಂಸ್ಥೆಗಳು ನೇರ ನೇಮಕಾತಿಯನ್ನೂ ಮಾಡಿಕೊಳ್ಳಲಿದೆ. ತರಬೇತಿ ಬಳಿಕ ಅದೇ ಸಂಸ್ಥೆಯಲ್ಲಿ ಉದ್ಯೋಗ ಪಡೆಯುವ ಅವಕಾಶವೂ ದೊರೆಯಬಹುದು. ತರಬೇತಿ ಅವಧಿಯಲ್ಲಿ ಸೂಕ್ತ ಸ್ಟೈಪೆಂಡ್ ಕೂಡ ಅಭ್ಯರ್ಥಿಗಳಿಗೆ ದೊರೆಯಲಿದೆ. ಕಳೆದ ಬಾರಿ ಭಾಗವಹಿಸಿದ್ದ ಎಲ್ಲ 600 ಮಂದಿಯನ್ನೂ ವಿವಿಧ ಕಂಪೆನಿಗಳು ತರಬೇತಿಗೆ ಆಯ್ಕೆ ಮಾಡಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸ್ಟ್ರಾಟಜಿಕ್ ಪ್ಲ್ಯಾನಿಂಗ್ ವಿಭಾಗದ ಡೀನ್ ರಮೇಶ್ ಕೆ.ಜಿ. ಅವರು ಉಪಸ್ಥಿತರಿದ್ದರು.