

ಹುಬ್ಬಳ್ಳಿ : ವಿಶ್ವ ರಕ್ತದಾನ ದಿನದ ಅಂಗವಾಗಿ ಶಾ ದಾಮಜಿ ಜಾದವಜಿ ಛೇಡಾ ಸ್ಮಾರಕ ರಾಷ್ಟ್ರೊತ್ಥಾನ ರಕ್ತಕೇಂದ್ರದ ವತಿಯಿಂದ ನಗರದಲ್ಲಿ ಶುಕ್ರವಾರ ಬೃಹತ್ ರಕ್ತದಾನ ಶಿಬಿರ ಹಾಗೂ ಜಾಗೃತಿಗಾಗಿ ನಡಿಗೆ’ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಜೇಥಿಯಾ ಪೌಂಡೆಶನ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಜಿತೇಂದ್ರ ಮಜೇಥಿಯಾ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಯಾಗಿದ್ದ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ರಕ್ತದಾನ ಮಾಡುವುದರಿಂದ 48 ಗಂಟೆಗಳಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ರಕ್ತದಾನ ಮಾಡುವವರ ಸಂಖ್ಯೆ ಹೆಚ್ಚಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಷ್ಟ್ರೆೊತ್ಥಾನ ರಕ್ತಕೇಂದ್ರದ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ, ರಕ್ತಕೇಂದ್ರ ಸೇವಾ ಚಟುವಟಿಗಳ ಬಗ್ಗೆ ವಿವರಿಸಿದರು. ಡೆಪ್ಯುಟಿ ಡ್ರಗ್ ಕಂಟ್ರೋಲರ್ ಡಾ. ಬಸವರಾಜ ಅಸಂಗಿ, ರಕ್ತದಾನದ ಮಹತ್ವ ತಿಳಿಸಿದರು. ಗೋಪಾಲಕೃಷ್ಣ ನಾಯಕ, ಡಾ. ನೀಲಕಂಠ ರಾಥೋಡ, ಡಾ. ರಾಹುಲ ಮುಂಗೆಕರ, ಡಾ. ಕ್ರಾಂತಿ ಕಿರಣ, ವಿನೋದಕುಮಾರ ಪಟ್ವಾ, ರಕ್ತಕೇಂದ್ರದ ವೈದ್ಯಾಧಿಕಾರಿ ಡಾ. ಎಸ್. ಎಸ್. ಸಂಗೋಳ್ಳಿ, ಸುಭಾಸ ಸಿಂಗ ಜಮಾದಾರ, ಮಹೇಂದ್ರ ಕೌತಾಳ, ರವಿ ನಾಯಕ, ಹನುಮಂತ ಶಿಗ್ಗಾವ್, ವಿಶ್ವನಾತ ರಾನಡೆ, ಲಕ್ಷ್ಮಣ ಕುಲಕರ್ಣಿ, ಸಂಜೀವ ಜೋಶಿ, ಹರೀಶ ಜೋಶಿ, ಸಂದೀಪ ಬುದಿಹಾಳ ಹಾಗೂ ಇತರರು ಇದ್ದರು.
ರಕ್ತದಾನ ಶಿಬಿರದಲ್ಲಿ ದತ್ತಮೂರ್ತಿ ಕುಲಕರ್ಣಿ ಅವರು 69ನೇ ಬಾರಿ, ಸ್ವರ್ಣ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ.ಎಸ್.ವಿ. ಪ್ರಸಾದ ಅವರು 83ನೇ ಬಾರಿ ಮತ್ತು ಕೇಶವ ವಿದ್ಯಾಲಯದ ಮುಖ್ಯಸ್ಥ ಶ್ರೀಧರ್ ಜೋಶಿ ಅವರು 52ನೇ ಬಾರಿ ರಕ್ತದಾನ ಮಾಡಿದರು.
ನಂತರ ನಡೆದ ಜಾಗೃತಿಗಾಗಿ ನಡಿಗೆ ಕಾರ್ಯಕ್ರಮದಲ್ಲಿ ಸುಮಾರು 25 ಪ್ರತಿಷ್ಟಿತ ಶಾಲಾ, ಕಾಲೇಜಿನ 1,830 ಸಿಬ್ಬಂದಿ ಮತ್ತು ವಿಧ್ಯಾರ್ಥಿಗಳು ಭಾಗವಹಿಸಿದ್ದರು.