ನಾಮಪತ್ರ ಸಲ್ಲಿಸುವ ಮುನ್ನ ಪಾದಯಾತ್ರೆ

Walk before submitting nomination papers
ಹುನಗುಂದ ಪಿಕೆಪಿಎಸ್ ನಿರ್ದೇಶಕ ಮಂಡಳಿಗೆ ಶಾಸಕ ವಿಜಯಾನಂದ ಕಾಶಪ್ಪನವರ ಬೆಂಬಲದ ಕಾಂಗ್ರೆಸ್ ಬಣದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಬಸವ ಮಂಟಪದಿಂದ ಅಪಾರ ಬೆಂಬಲಿಗರೊಂದಿಗೆ ಪಾದಯಾತ್ರೆ ಮೂಲಕ ತೆರಳಿದರು. ರವಿ ಹುಚನೂರ, ದೇವು ಡಂಬಳ, ಕುಮಾರ ಘಟ್ಟಿಗನೂರ, ಸಂಗಮೇಶ ಭದ್ರಶೆಟ್ಟಿ ಇತರರಿದ್ದರು.
Published on

ಹುನಗುಂದ: ಶಾಸಕ ವಿಜಯಾನಂದ ಕಾಶಪ್ಪನವರ ಬೆಂಬಲದ ಕಾಂಗ್ರೆಸ್ ಬಣದ 12 ಅಭ್ಯರ್ಥಿಗಳು ಶುಕ್ರವಾರ ಹುನಗುಂದ ಪಿಕೆಪಿಎಸ್ ಚುನಾವಣಾಧಿಕಾರಿ ಎಸ್.ಜಿ. ಕಡಿವಾಲ ಅವರಿಗೆ ನಾಮಪತ್ರ ಸಲ್ಲಿಸಿದರು.

ಇದಕ್ಕೂ ಮುನ್ನ ಬಸವ ಮಂಟಪದಿಂದ ನೂರಾರು ಬೆಂಬಲಿಗರೊಂದಿಗೆ ಚನ್ನಮ್ಮ ವೃತ್ತ, ಮೇನ್ ಬಜಾರ್, ಗಾಂಧಿ ವೃತ್ತ, ಲಿಂಗದ ಕಟ್ಟಿ ಮೂಲಕ ಪಾದಯಾತ್ರೆ ನಡೆಸಿದರು.

ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಮಂಡಳಿಯ 5 ವರ್ಷ ಅವಧಿಗಾಗಿ ಜು.30 ರಂದು ಚುನಾವಣೆ ನಡೆಯಲಿದೆ. ಒಟ್ಟು 12 ಸ್ಥಾನಕ್ಕೆ ಅಭ್ಯರ್ಥಿಗಳಾದ ರವಿ ಹುಚನೂರ, ರವಿ ಹೂಲಗೇರಿ, ಕುಮಾರ ಘಟ್ಟಿಗನೂರ, ಈಶ್ವರಗೌಡ ನಾರಾಯನಗೌಡರ, ದೀಪಾ ಸುಂಕದ, ಅನ್ನಪೂರ್ಣ ಹೊಸೂರ, ಸಂಗಮೇಶ ಭದ್ರಶೆಟ್ಟಿ, ಬಸಪ್ಪ ಹಾದಿಮನಿ, ಮಹಾಂತೇಶ ಹೊಸೂರ, ಹನುಮಂತಪ್ಪ ಸುಣಕಲ್ಲ, ದೇವಪ್ಪ ಡಂಬಳ, ಚೇತನ ಮುಕ್ಕಣ್ಣವರ ಉಮೇದುವಾರಿಕೆ ಸಲ್ಲಿಸಿದರು.

ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರಾದ ನೀಲಪ್ಪ ತಪೇಲಿ, ಸಂಗಪ್ಪ ಹೂಲಗೇರಿ, ಶರಣು ಬೆಲ್ಲದ, ಶರಣಪ್ಪ ಹೊಸೂರ, ಮಹಾಂತೇಶ ಮುಕ್ಕಣ್ಣವರ, ಶಿವಾನಂದ ಕಂಠಿ, ಸಂಗಣ್ಣ ಗಂಜೀಹಾಳ, ಮಲ್ಲಪ್ಪ ಸುಂಕದಕಟ್ಟಿ, ಶರಣು ಲೆಕ್ಕಿಹಾಳ, ಜಕ್ಕಪ್ಪ ಹುನ್ನಳ್ಳಿ, ನೀಲಪ್ಪ ಮುಕ್ಕಣ್ಣವರ ಇತರರಿದ್ದರು.

ಸ್ವತಂತ್ರ ಅಭ್ಯರ್ಥಿಗಳಾಗಿ ಶಾಂತಕುಮಾರ ಮೂಕಿ, ಮಹಾಂತೇಶ ಶೆಟ್ಟರ್ ನಾಮಪತ್ರ ಸಲ್ಲಿಸಿದ್ದು, ಜು.16 ರಿಂದ 21 ರವರೆಗೆ ಒಟ್ಟು 36 ನಾಮ ಪತ್ರ ಸಲ್ಲಿಕೆಯಾಗಿವೆ ಎಂದು ರಿಟರ್ನಿಂಗ್ ಆಫೀಸರ್ ಎಸ್.ಜಿ. ಕಡಿವಾಲ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net