ಜೂ.21 ರಂದು ‘ವಾಲಿ ಮೋಕ್ಷ’ ಇಂಗ್ಲಿಷ್ ಯಕ್ಷಗಾನ ಪ್ರದರ್ಶನ

Published on

ಮಂಗಳೂರು: ಪಿ.ವಿ. ಐತಾಳ ಇಂಗ್ಲಿಷ್ ಯಕ್ಷಗಾನ ಬಳಕ ‘ಯಕ್ಷನಂದನ’ ಇದರ 44ನೇ ವರ್ಷಾಚರಣೆಯ ಹಿನ್ನಲೆಯಲ್ಲಿ ‘ವಾಲಿ ಮೋಕ್ಷ’ ಇಂಗ್ಲಿಷ್ ಯಕ್ಷಗಾನ ಪ್ರದರ್ಶನ ಜೂ.21 ರಂದು ಸಂಜೆ 5.30 ರಿಂದ 9 ಗಂಟೆಯವರೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ಯಕ್ಷನಂದನ ಸಂಚಾಲಕ ಪಿ.ಸಂತೋಷ್ ಐತಾಳ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಯಕ್ಷಗಾನ ಪ್ರದರ್ಶನಕ್ಕೂ ಮುನ್ನ ನಡೆಯುವ ಸಭಾ ಕಾರ್ಯಕ್ರಮದ ಉದ್ಘಾಟನೆ ಹಾಗೂ ಆಶೀರ್ವಚನವನ್ನು ಎಡನೀರು ಮಠದ ಸಚ್ಚಿದಾನಂದ ಭಾರತಿ ಶ್ರೀಗಳು ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಕಸಾಪ ಮಾಜಿ ರಾಜ್ಯಾಧ್ಯಕ್ಷ ಡಾ.ಹರಿಕೃಷ್ಣ ಪುನರೂರು ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಮಾಜಿ ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್ ಭಾಗವಹಿಸಲಿದ್ದಾರೆ ಎಂದರು.

ಅನೇಕ ಬಾಲ-ಬಾಲಿಕಾ ಕಲಾವಿದರು ಯಕ್ಷನಂದನ ಬಳಗದಲ್ಲಿ ಯಕ್ಷಗಾನವನ್ನು ಮುಂದಿನ ತಲೆಮಾರಿಗೂ ವರ್ಗಾಯಿಸುವ ಕಾರ್ಯವನ್ನು ಮಾಡಿದ್ದಾರೆ. ‘ವಾಲಿ ಮೋಕ್ಷ’ ಇಂಗ್ಲಿಷ್ ಯಕ್ಷಗಾನ ಪ್ರಸಂಗವನ್ನು ಪಿ.ಸುರೇಶ್ ಕುಮಾರ್ ಐತಾಳ ಅವರು ಬರೆದಿದ್ದಾರೆ. ಅನೇಕ ಬಡ ವಿದ್ಯಾರ್ಥಿಗಳಿಗೆ ಸಹಾಯಕರಾಗಿ ನಿಂತು ಉದ್ಯೋಗಾವಕಾಶ ಕಲ್ಪಿಸಿಕೊಟ ಪಿ.ವಿ. ಐತಾಳರ ಸ್ಮರಣಾರ್ಥ ಅವರ ಪತ್ನಿ ಹಾಗೂ ಮಕ್ಕಳು ಹುಟ್ಟು ಹಾಕಿದ ಶ್ರೀ ಪಿ.ವಿ. ಐತಾಳ ಮೆಮೋರಿಯಲ್ ‘ವೆಂಕಟ ರತ್ನ’ ಚಾರೀಟೇಬಲ್ ಟ್ರಸ್ಟಿನ ವತಿಯಿಂದ ಕೊಡಲ್ಪಡುವ ವಿದ್ಯಾನಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು. ದ್ವಿತೀಯ ಪಿ.ಯು.ಸಿ.ಯಲ್ಲಿ 5ನೇ ರ‌್ಯಾಂಕ್‌ಗಳಿಸಿರುವ ಅಲೋಸಿಯಸ್ ಪಿ.ಯು. ಕಾಲೇಜಿನ ವಿದ್ಯಾರ್ಥಿ ಪ್ರದ್ಯೂಮ್ನ ಆರ್. ಉರಾಳ ಹಾಗೂ ರಾಜೀವ್‌ಗಾಂದಿ ಯುನಿವರ್ಸಿಟಿಯಲ್ಲಿ ಎಂ.ಎಸ್.ಇ.ಎನ್.ಟಿ.ಯಲ್ಲಿ 6ನೇ ರ‌್ಯಾಂಕ್ ಗಳಿಸಿದ ಎ.ಜೆ. ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಡಾ.ಶಿವಪ್ರಸಾದ್ ಕಾರಂತ್, ಹಾಗೂ ಐ.ಐ.ಎಸ್.ಇ.ಆರ್. ಪುಣೆಯಲ್ಲಿ ಬಿ.ಎಸ್.ಎಂ.ಎಸ್. ಡಿಗ್ರಿ ಮುಗಿಸಿ ಪಿ.ಎಚ್‌ಡಿ. ಇನ್ ನ್ಯೂರೋ ಸೈನ್ಸ್‌ನಲ್ಲಿ ಬ್ರಾಂಡೀಸ್ ಯುನಿವರ್ಸಿಟಿ, ಯು.ಎಸ್.ಎ ಗೆ ತೆರಳಲಿರುವ ಬಪ್ಪನಾಡಿನ ವಾಸುದೇವ ಕೆ. ಭಟ್ ಅವರಿಗೆ ಪುರಸ್ಕಾರ ಮಾಡಲಿದ್ದೇವೆ ಎಂದರು.

ಯಕ್ಷನಂದನ ಬಳಗದ ಪ್ರಮುಖರಾದ ರವಿ ಅಲೆವೂರಾಯ ವರ್ಕಾಡಿ, ಡಾ.ಪಿ.ಸತ್ಯಮೂರ್ತಿ ಐತಾಳ, ಪಿ. ಸುರೇಶ್ ಕುಮಾರ್ ಐತಾಳ, ವೃಂದಾ ಕೊನ್ನಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net