ವಕ್ಫ್ ಆರ್‌ಟಿಸಿ ತಿದ್ದುಪಡಿಯಾಗಲಿ: ಈಶ್ವರಪ್ಪ ಒತ್ತಾಯ

kse
ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ.
Published on

ಶಿವಮೊಗ್ಗ: ಈಗಾಗಲೇ ಹಲವು ಮಠ, ಮಂದಿರಗಳು, ರೈತರ ಭೂಮಿಯನ್ನು ವಕ್ಫ್ ಆಸ್ತಿ ಎಂದು ಆರ್‌ಟಿಸಿಯಲ್ಲಿ ನಮೂದು ಮಾಡಲಾಗಿದೆ. ಮೊದಲು ಇದನ್ನು ಬದಲಿಸಬೇಕು. ನೈಜ ವಾರಾಸುದಾರರ ಹೆಸರಿಗೆ ಆರ್‌ಟಿಸಿ ಮಾಡಬೇಕು. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡ ಹಗರಣದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಸರ್ಕಾರ ಹೊಸ ನಾಟಕ ಆರಂಭಿಸಿದೆ. ಅಯೋಧ್ಯೆ ವಿಚಾರದಲ್ಲಿ ನ್ಯಾಯ ಸಿಕ್ಕಂತೆಯೇ ಮುಂದೊಂದು ದಿನ ವಕ್ಫ್ ಹಗರಣದಲ್ಲೂ ಮುಂದೊಂದು ದಿನ ಸತ್ಯ ಹೊರಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಬದುಕಿದೆಯೇ? ಸತ್ತಿದೆಯೆ? ಎಂಬುದು ತಿಳಿಯುತ್ತಿಲ್ಲ. ಶಿವಮೊಗ್ಗದಲ್ಲಿ ನಗರದ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಅದನ್ನು ಮುಚ್ಚಲೂ ಹಣವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಗುಂಡಿಗಳಿಗೆ ಮಣ್ಣು ಹಾಕಲೂ ಸಾಧ್ಯವಾಗುತ್ತಿಲ್ಲ. ಆಶ್ರಯ ಬಡಾವಣೆಗೆ ಮೂಲ ಸೌಕರ್ಯ ಒದಗಿಸಲು 15 ಕೋಟಿ ರೂ. ಬೇಕಿದೆ. ಈ ಅನುದಾನವನ್ನು ತರಲು ಜಿಲ್ಲಾ ಉಸ್ತುವಾರಿ ಸಚಿವರಿಂದ ಸಾಧ್ಯವಾಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ನಾವು ನಗರ ಪಾಲಿಕೆಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಕೆ.ಎಸ್.ಈಶ್ವರಪ್ಪ ಎಚ್ಚರಿಸಿದರು.

ಕ್ರಾಂತಿವೀರ ಬ್ರಿಗೇಡ್‌ಗೆ ಮಾರ್ಗದರ್ಶಕ ಮಂಡಳಿ ರಚನೆಯಾಗಿದೆ. ರಾಜ್ಯದ 60 ಪ್ರಮುಖರ ಸಭೆ ನಡೆದಿದೆ. ೆ.4ರಂದು ಬಸವನಬಾಗೇವಾಡಿಯಲ್ಲಿ ವಿಜೃಂಭಣೆಯಿಂದ 1008 ಸಾಧು ಸಂತರಿಗೆ ಪಾದಪೂಜೆ ಮಾಡಿ ನಂತರ ಬ್ರಿಗೇಡ್ ಉದ್ಘಾಟಿಸಲಾಗುವುದು. ಹಿಂದುಳಿದವರು, ದಲಿತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಕ್ರಾಂತಿವೀರ ಬ್ರಿಗೇಡ್ ಧ್ವನಿ ಎತ್ತಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net