ಬೊಬ್ರುವಾಡ ಜಮೀನು ದಾಖಲೆಯಲ್ಲಿ ವಕ್ಫ್ ಹೆಸರು!

CHARCHE
Published on

ಅಂಕೋಲಾ: ತಾಲೂಕಿನ ಬೊಬ್ರುವಾಡ ಗ್ರಾಮದಲ್ಲಿ ಕೆಲ ಕೃಷಿಕರ ಜಮೀನು ದಾಖಲೆಯ 11ನೇ ಕಾಲಂನಲ್ಲಿ ವಕ್ಫ್ ಎಂದು ನಮೂದಾಗಿರುವ ಕುರಿತು ಮಾಹಿತಿಯಿದ್ದು, ತಾಲೂಕಿನಲ್ಲಿ ಇಂತಹ ಎಷ್ಟು ಪ್ರಕರಣಗಳಿವೆ ಎಂದು ಸ್ಪಷ್ಟಪಡಿಸಬೇಕೆಂದು ಬಿಜೆಪಿ ಮುಖಂಡರು ತಹಸೀಲ್ದಾರ್ ಅನಂತ ಶಂಕರ ಅವರನ್ನು ಆಗ್ರಹಿಸಿದರು.

ಸೋಮವಾರ ತಹಸೀಲ್ದಾರ್ ಕಚೇರಿಗೆ ತೆರಳಿದ ಬಿಜೆಪಿ ಮುಖಂಡರು ಈ ಕುರಿತು ಚರ್ಚೆ ನಡೆಸಿದರು.

ತಹಸೀಲ್ದಾರ್ ಅನಂತ ಶಂಕರ ಮಾತನಾಡಿ, ಅಂತಹ ದಾಖಲೆಗಳಿದ್ದರೆ ನನಗೆ ತಕ್ಷಣ ನೀಡಿ. ಜತೆಗೆ ಇನ್ನೆಲ್ಲಿ ಇಂತಹ ಪ್ರಕರಣಗಳು ನಡೆದಿವೆ ಎಂದು ತನಿಖೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.

ಬಿಜೆಪಿ ಮುಖಂಡರಾದ ಜಗದೀಶ ಜಿ. ನಾಯಕ ಹೊಸ್ಕೇರಿ, ರಾಜೇಂದ್ರ ವಿ. ನಾಯ್ಕ, ಸಂಜಯ ನಾಯ್ಕ ಭಾವಿಕೇರಿ, ಬಿಂದೇಶ ನಾಯಕ, ನಿಲೇಶ ನಾಯ್ಕ, ಸಂದೀಪ ನಾಯ್ಕ, ಆನಂದ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net