

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ವಕ್ಫ್ ಆಸ್ತಿ (ಸ್ಮಶಾನ ಜಾಗ) ಒತ್ತುವರಿ ಆರೋಪ ಎದುರಿಸುತ್ತಿರುವ ಮಡಿಕೇರಿಯ ವಕೀಲ ಕೆ.ಎಂ. ಕುಂಞಿ ಅಬ್ದುಲ್ಲಾ ಅವರನ್ನು ವಕ್ಫ್ ಮಂಡಳಿ ಜಿಲ್ಲಾ ಸಲಹಾ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಿರುವುದು ವಿವಾದದ ಸ್ಪರೂಪ ಪಡೆದುಕೊಂಡಿದೆ. ಕುಂಞಿ ಅಬ್ದುಲ್ಲಾ ಮಾಡಲು ಕರ್ನಾಟಕ ವಕ್ಫ್ ಮಂಡಳಿಗೆ ದೂರು ಸಲ್ಲಿಕೆಯಾಗಿದೆ.
ಮಡಿಕೇರಿ ಹಿಲ್ ರಸ್ತೆಯಲ್ಲಿರುವ ವಕ್ಫ್ ಆಸ್ತಿ ಒತ್ತುವರಿ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ವಕ್ಫ್ ನ್ಯಾಯಾಧೀಕರಣದಲ್ಲಿ ವ್ಯಾಜ್ಯ ನಡೆಯುತ್ತಿದೆ. ಒತ್ತುವರಿ ಮಾಡಿಕೊಂಡು ವಕ್ಫ್ ಜಾಗದಲ್ಲಿ ನಿರ್ಮಿಸಿರುವ ಕಟ್ಟಡ ತೆರವುಗೊಳಿಸದ್ದಂತೆ ಕುಂಞಿ ಅಬ್ದುಲ್ಲಾ ಹೈಕೋಟರ್‌ನಲ್ಲಿ ತಡೆಯಾಜ್ಞೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ವಕ್ಫ್ ಮಂಡಳಿ ಜಿಲ್ಲಾ ಸಲಹಾ ಸಮಿತಿ ಸದಸ್ಯತ್ವದಿಂದ ವಜಾ ಮಾಡಬೇಕೆಂದು ರಾಣಿಪೇಟೆ ನಿವಾಸಿ ಪಿ.ಕೆ ಸಲಾಂ ಕರ್ನಟಕ ವಕ್ಫ್ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಆ.೧೭ ರಂದು ಲಿಖಿತ ದೂರು ಸಲ್ಲಿಸಿದ್ದಾರೆ.
ವಕ್ಫ್ ಮಂಡಳಿ ಸಲಹಾ ಸಮಿತಿ ಸದಸ್ಯತ್ವಕ್ಕೆ ನಾನು ಯಾವ ಪ್ರಯತ್ನವೂ ಮಾಡಿರಲಿಲ್ಲ. ಹಾಗೇ ಪ್ರಯತ್ನ ಮಾಡುವುದಾದ್ದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರಯತ್ನಿಸುತ್ತಿದೆ. ಅಷ್ಟೊಂದು ಪ್ರಭಾವ ಹಾಗೂ ಗೌರವ ನನ್ನ ಮೇಲಿದೆ. ನನ್ನ ಮೇಲೆ ಇಟ್ಟಿರುವ ನಿರೀಕ್ಷೆ ಉಳಿಸಿಕೊಳ್ಳಲು ಸದಸ್ಯನಾಗಿ ನನ್ನ ಜವಾಬ್ದಾರಿ ನಿರ್ವಹಿಸುತ್ತೇನೆಂದು ಕೆ.ಎಂ. ಕುಂಞಿ ಅಬ್ದುಲ್ಲಾ ವಿಜಯವಾಣಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಕ್ಫ್ ಮಂಡಳಿಗೆ ಸೇರಿದ ಆಸ್ತಿ ಒತ್ತುವರಿ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ವಿವಾದಕ್ಕೆ ಸಿಲುಕಿರುವ ವ್ಯಕ್ತಿಯನ್ನು ವಕ್ಫ್ ಮಂಡಳಿ ಕೊಡಗು ಜಿಲ್ಲಾ ಸಲಹಾ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಿರುವುದು ಸರಿಯಲ್ಲ. ವಕ್ಫ್ ಮಂಡಳಿ ಆಸ್ತಿ ಸಂರಕ್ಷಿಸುವ ಉದ್ದೇಶ ದಿಂದ ಸದಸ್ಯತ್ವದಿಂದ ವಜಾ ಮಾಡಬೇಕೆಂದು ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಮೀರ್ ಆಗ್ರಹಿಸಿದ್ದಾರೆ.
ವಕ್ಫ್ ಮಂಡಳಿ ವಾದ
೧೯೩೭ ನೇ ಸಾಲಿನ ಪೂರ್ವ ಮುನ್ಸಿಪಾಲಿಟಿ ದಾಖಲೆಗಳಲ್ಲಿ ಮೊಹಮ್ಮದನ್ ಕಮಿಟಿ ಹೆಸರಿನಲ್ಲಿ ಸರ್ವೇ ನಂಬರ್ ೧೪೪ ರಲ್ಲಿ ೨.೯೪ ಎಕರೆ ಸ್ಮಶಾನ ಜಾಗದ ದಾಖಲೆ ಇರುತ್ತದೆ. ೧೯೯೯ ರಲ್ಲಿ ಮುನ್ಸಿಪಾಲಿಟಿ ವತಿಯಿಂದ ಕೈಗೊಂಡ ಸರ್ವೇಯಿಂದಲೂ ೨.೯೪ ಎಕರೆ ಜಾಗ ಇರುವುದಾಗಿದೆ.
೨-೦೮-೨೦೧೦ ರಲ್ಲಿ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟವಾಗಿದ್ದ ಸಂದರ್ಭದಲ್ಲಿ ಆಕ್ಷೇಪ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆ ಸಂದರ್ಭ ಯಾವುದೇ ಆಕ್ಷೇಪಣೆ ಸಲ್ಲಿಕೆಯಾಗಿರುವುದಿಲ್ಲ. ವಕ್ಫ್ ಟ್ರಿಬ್ಯೂನಲ್‌ನಲ್ಲಿ ಕೂಡ ಪ್ರಕರಣ ದಾಖಲಾಗಿದೆ. ವಕ್ಫ್ ಮಂಡಳಿಗೆ ಇರುವ ಅಧಿಕಾರ ದಂತೆ ನಿಯಮನುಸಾರ ಕ್ರಮ ಕೈಗೊಂಡಿದ್ದು, ವಕ್ಫ್ ಆಯುಕ್ತರು ಕೂಡ ನೇಮಕ ಆಗಿ ಸರ್ವೇ ಮಾಡಿ ಸವೇ ನಂಬರ್ ೧೪೪ ರ ಮುನ್ಸಿಪಾಲಿಟಿ ಬ್ಲಾಕ್ ನಂಬರ್ ೪ ಮುನ್ಸಿಪಲ್ ಸರ್ವೇ ನಂಬರ್ ೧೪೪ ರಲ್ಲಿ ೨.೯೪ ಎಕರೆ ವಿಸ್ತೀರ್ಣದ ಹದ್ದುಬಸ್ತು ಗುರುತಿಸಲಾಗಿದೆ.
ಮಡಿಕೇರಿ ತಹಸೀಲ್ದಾರ್ ಹಾಗೂ ಕೋರ್ಟ್ ಕಮಿಷನ್ ಸರ್ವೇ ಕಾರ್ಯ ಕೈಗೊಂಡು, ಸದರಿ ಜಾಗದಲ್ಲಿ ಒತ್ತುವರಿ ಮಾಡಿಕೊಂಡಿದ್ದ ಒತ್ತುವರಿದಾರರ ಪೈಕಿ ೧೦ ಒತ್ತುವರಿದಾರರು ಜಾಗ ಖಾಲಿ ಮಾಡಿದ್ದಾರೆ.
೧೯೯೫ ರ ವಕ್ಫ್ ಕಾಯ್ದೆಯ ಪರಿಚ್ಛೇದ ೫೨(ಎ) ರಂತೆ ವಕ್ಫ್ ಆಸ್ತಿ ಒತ್ತುವರಿ ಮಾಡಿದಲ್ಲಿ ಜಾಮೀನು ರಹಿತ ಅಪರಾಧ ಆಗುವುದ ರಿಂದ ಒತ್ತುವರಿದಾರರು ಈ ಪ್ರಕರಣ ಮರೆಮಾಚಲು ಪ್ರಕರಣ ದಾಖಲಿಸಿದ್ದು, ಮುನ್ಸಿಪಾಲಿಟಿ ಸರ್ವೇ ನಂಬರ್ ೧೪೪ ರಲ್ಲಿ ನಿರ್ವಹಣೆ ಮಾಡುತ್ತಿ
ರುವ ೨.೯೪ ಎಕರೆ ಸ್ಮಶಾನ ಜಾಗದ ದಾಖಲೆ ತಿದ್ದುಪಡಿ ಮಾಡಲು ಪ್ರಶ್ನೆ ಬರುವುದಿಲ್ಲ. ಕಂದಾಯ ಇಲಾಖೆಯ ದಾಖಲೆಗಳಲ್ಲಿ ದಾಖಲಾಗಿರುವ ವಿಸ್ತೀರ್ಣದ ವ್ಯತ್ಯಾಸವನ್ನು ಮುನಿಸಿಪಲ್ ದಾಖಲೆಯಂತೆ ಸರಿ ಪಡಿಸಿ, ದಾಖಲಿಸಲು ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ವಕ್ಫ್ ಮಂಡಳಿ ಸಲ್ಲಿಸಿದ ಮಾಹಿತಿಯಲ್ಲಿ ಕೋರಿದ್ದರು.
ಜಿಲ್ಲಾಧಿಕಾರಿ ಆದೇಶ
ಮುನ್ಸಿಪ್ ಸರ್ವೇ ನಂಬರ್ ೧೪೪ ರಲ್ಲಿ ದಾಖಲಾಗಿರುವ ೨.೯೪ ಎಕರೆ ಜಾಗ ಬ್ಲಾಕ್ ನಂಬರ್ ೪ ರ ಮುನ್ಸಿಪಾಲಿಟಿ ವ್ಯಾಪ್ತಿಯ ಜಾಗವಾಗಿರು ತ್ತದೆ. ಮುನ್ಸಿಪಾಲಿಟಿ ವ್ಯಾಪ್ತಿಯಲ್ಲಿ ಬರುವ ದಾಖಲೆಗಳನ್ನು ಮುನ್ಸಿಪಾಲಿಟಿ ಕಾಯ್ದೆಯಂತೆ ದಾಖಲೆ ನಿರ್ವಹಣೆ ಮಾಡುವ ಅಧಿಕಾರ ಮುನ್ಸಿಪಾಲಿಟಿಗೆ ಇದೆ ೨೭-೦೩-೨೦೧೭ ರಲ್ಲಿ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಜಿಲ್ಲಾಧಿಕಾರಿ ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಮಡಿಕೇರಿ ನಗರಸಭೆ ಸಲ್ಲಿಸಿದ ೧೯೧೧೦೧೨ ನೇ ಸಾಲಿನ ಮುನ್ಸಿಪಾಲಿಟಿ ಜಮಾಬಂದಿ ಪ್ರಕಾರ ಮುನ್ಸಿಪಾಲಿಟಿ ಸರ್ವೇ ನಂಬರ್ ೧೪೪ ರಲ್ಲಿ ೩ ಎಕರೆ ದಾಖಲೆ ಕಂಡು ಬಂದಿದ್ದು, ಎಂಸಿ ನಂಬರ್ ೬೪/ದಿನಾಂಕ : ೨೩-೬-೧೯೩೭ ರ ಪ್ರಕಾರ ೦.೦೬ ಎಕರೆ ಜಾಗ ಕಳೆದು ಉಳಿಕೆ ೨.೯೪ ಎಕರೆ ಮುನ್ಸಿಪಾಲಿಟಿ ದಾಖಲೆಗೆ ತಾಳೆ ಕಂಡು ಬಂದಿದೆ. ೨.೯೪ ಎಕರೆ ಜಾಗದ ದಾಖಲೆ ಕರ್ನಾಟಕ ರಾಜ್ಯ ಪತ್ರದಲ್ಲೂ ಪ್ರಕಟಣೆ ಆಗಿದ್ದು, ತಹಸೀಲ್ದಾರ್ ೨ಸರ್ವೇ ಮಾಡಿ ಒತ್ತುವರಿ ಆಗಿರುವುದು ದೃಢೀಕರಿಸಿ ನಕಾಶೆ ತಯಾರಿಸಿರುವುದು ಕಂಡು ಬಂದಿದೆ ಎಂದು ಉಲ್ಲೇಖಿಸಿದ್ದಾರೆ.
**
ವಕ್ಫ್ ಮಂಡಳಿ ಕೊಡಗು ಜಿಲ್ಲಾ ಸಲಹಾ ಸಮಿತಿ ಕೆಲವು ಸದಸ್ಯರ ಮೇಲೆ ವಕ್ಫ್ ಆಸ್ತಿ ವಶ ಪಡಿಸಿಕೊಂಡಿರುವ ಬಗ್ಗೆ ಮಡಿಕೇರಿಯ ಮಸೀದಿ ಆಡಳಿತ ಮಂಡಳಿ ನಮ್ಮ ಗಮನಕ್ಕೆ ತಂದಿದ್ದಾರೆ. ಇದರ ಸಾಕ್ಷೃ, ದಾಖಲಾತಿ ಕೇಳಿದ್ದೇನೆ. ಕೊಡಗಿನ ಶಾಸಕರ ಮೂಲಕ ಸರ್ಕಾರದ ಗಮನಕ್ಕೆ ತರುತ್ತೇನೆ ಹಾಗೂ ಕರ್ನಾಟಕ ವಕ್ಫ್ ಮಂಡಳಿ ಅಧಿಕಾರಿಗೂ ದಾಖಲೆ ಕಳುಹಿಸುತ್ತೇನೆ. ಪಿ.ಎಂ. ಹಕೀಂ, ಅಧ್ಯಕ್ಷರು, ವಕ್ಫ್ ಮಂಡಳಿ ಕೊಡಗು ಜಿಲ್ಲಾ ಸಲಹಾ ಸಮಿತಿ.
**
ನನ್ನ ತಂದೆ ಸೀತಮ್ಮ ಎಂಬುವವರಿಗೆ ಹಲವು ವರ್ಷಗಳ ಹಿಂದೆ ಜಾಗ ಖರೀದಿಸಿದ್ದು, ನಾವು ವಕ್ಫ್ ಜಾಗ ಒತ್ತುವರಿ ಮಾಡಿಕೊಂಡಿಲ್ಲ. ಮಡಿಕೇರಿ ಜಾಮಿಯಾ ಮಸೀದಿ ದೂರಿಗೆ ಸಂಬಂಧಿಸಿದ್ದಂತೆ ಪ್ರಕರಣ ಹೈಕೋಟರ್ ಮತ್ತು ವಕ್ಫ್ ನ್ಯಾಯಾಧೀಕರಣದಲ್ಲಿ ಇತ್ಯರ್ಥಕ್ಕೆ ಬಾಕಿ ಇದೆ. ವಕ್ಫ್ ಮಂಡಳಿಗೆ ಸೇರಿದ ೧೦ ಅಡಿ ಜಾಗ ಒತ್ತುವರಿ ಮಾಡಿಕೊಂಡಿರುವುದನ್ನು ಸಾಬೀತು ಪಡಿಸಿದ್ದಲ್ಲಿ ಸಂಪೂರ್ಣ ಕಟ್ಟಡ ಉಡುಗೊರೆ ಯಾಗಿ ನೀಡುತ್ತೇನೆ. ಕುಂಞಿ ಅಬ್ದುಲ್ಲಾ, ನೂತನ ಸದಸ್ಯರು, ವಕ್ಫ್ ಮಂಡಳಿ ಕೊಡಗು ಜಿಲ್ಲಾ ಸಲಹಾ ಸಮಿತಿ.