ವಂಚನೆಗೊಳಗಾಗುವ ಮುನ್ನ ಜಾಗೃತಗೊಳ್ಳಿ

21 ckm 4
ಚಿಕ್ಕಮಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಲಾಗಿದ್ದ ತಿಂಗಳ ಅತಿಥಿ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಎಸ್‌ಪಿ ವಿಕ್ರಮ್ ಅಮಟೆ ಸೈಬರ್ ಕ್ರೆÊಂ ಹಾಗೂ ಸೈಬರ್ ಫೈನಾನ್ಷಿಯಲ್ ಫ್ರಾಡ್ ಬಗ್ಗೆ ಮಾಹಿತಿ ನೀಡಿದರು. ಎಎಸ್‌ಪಿ ಕೃಷ್ಣಮೂರ್ತಿ, ಇನ್ಸ್ಪೆಕ್ಟರ್ ಗವಿರಾಜ್, ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ರಾಜೇಶ್, ಕಾರ್ಯದರ್ಶಿ ತಾರಾನಾಥ್ ಉಪಸ್ಥಿತರಿದ್ದರು.
Published on

ಚಿಕ್ಕಮಗಳೂರು: ಸೈಬರ್ ಫೈನಾನ್ಸಿಯಲ್ ಫ್ರಾಡ್‌ಗಳಲ್ಲಿ ದಿನ ಕಳೆದಂತೆ ಹೊಸಹೊಸ ವಂಚನೆ ಜಾಲಗಳು ಹುಟ್ಟಿಕೊಳ್ಳುತ್ತಿದ್ದು, ಸಾರ್ವಜನಿಕರು ವಂಚನೆಗೊಳಗಾಗುವ ಮುನ್ನವೇ ಈ ಕುರಿತು ಜಾಗೃತಗೊಳ್ಳಬೇಕು ಎಂದು ಎಸ್‌ಪಿ ವಿಕ್ರಮ್ ಅಮಟೆ ಸಲಹೆ ನೀಡಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ತಿಂಗಳ ಅತಿಥಿ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೈಬರ್ ಕ್ರೈಂ ಬಗ್ಗೆ ಮಾಹಿತಿ ನೀಡಿದ ಅವರು, ಜನ ಯಾವುದೇ ಫೋನ್ ಕರೆ, ಮೆಸೇಜ್ ಅಥವಾ ಇ ಮೇಲ್ ಗಳು ಬಂದರೆ ಕೂಡಲೇ ಸ್ಪಂದಿಸಬಾರದು. ಕೂಡಲೇ ಸ್ಪಂದಿಸಿ ಅವರು ಹೇಳಿದಂತೆ ಕೇಳಿದಾಗಲೇ ವಂಚನೆಗೊಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ರೀತಿಯ ವಂಚನೆಯ ಜಾಲಗಳನ್ನು ನಾವು ನೋಡುತ್ತಿz್ದೆÃವೆ. ಸ್ಟಾಕ್ ಮಾರ್ಕೆಟ್ ಬಿಸಿನೆಸ್ ಹೆಸರಿನಲ್ಲಿ ಹಣ ದ್ವಿಗುಣಗೊಳಿಸಿ ಕೊಡುವುದಾಗಿ ಹೇಳಿ ವಂಚನೆ ಮಾಡಲಾಗುತ್ತಿದೆ. ಇದಲ್ಲದೆ ಪ್ರಮುಖವಾಗಿ ಡಿಜಿಟಲ್ ಅರೆಸ್ಟ್ ಎನ್ನುವ ಹೊಸ ವಂಚನೆ ಜಾಲವು ಸಕ್ರಿಯವಾಗಿದೆ ಈ ಬಗ್ಗೆ ಜನ ಜಾಗೃತಗೊಳ್ಳಬೇಕು ಎಂದರು.
ಸ್ಟಾಕ್ ಮಾರ್ಕೆಟ್ ಹೆಸರಿನಲ್ಲಿ ಹಣ ದ್ವಿಗುಣಗೊಳಿಸಿಕೊಡುವುದಾಗಿ ಹೇಳುವ ವಂಚಕರು ಆರಂಭದಲ್ಲಿ ಹಣವನ್ನು ದ್ವಿಗುಣಗೊಳಿಸಿ ಕೊಡುತ್ತಾರೆ. ಬಳಿಕ ಹಣದ ಆಸೆಗೆ ಬಿದ್ದ ಜನ ದೊಡ್ಡಮೊತ್ತದ ಹಣ ನೀಡಿದಾಗ ಹಣ ಪಡೆದು ವಂಚನೆ ಮಾಡುತ್ತಾರೆ. ಇನ್ನು ಡಿಜಿಟಲ್ ಅರೆಸ್ಟ್ ವಿಷಯಕ್ಕೆ ಬಂದಲ್ಲಿ ವಿಡಿಯೋ ಕರೆ ಮಾಡುವ ವಂಚಕರು ಪೊಲೀಸರಂತೆಯೇ ನಟಿಸಿ ವಂಚನೆಗೊಳಗಾಗುವವರ ಕಚೇರಿಗೆ ಸಂಬAಧಿಸಿದ ವಿಷಯಗಳಿಗೆ ಸಂಬAಧಿಸಿದAತೆ ಬೆದರಿಸುತ್ತಾರೆ. ಬಳಿಕ ಕೇಸ್ ಕ್ಲೋಸ್ ಮಾಡಲು ಇಂತಿಷ್ಟು ಹಣ ಎಂದು ನಿಗದಿಪಡಿಸಿ ವಂಚನೆ ಮಾಡುತ್ತಾರೆ. ಇಲ್ಲಿ ವಂಚನೆಗೊಳಗಾದವರು ತಪ್ಪು ಮಾಡದಿದ್ದರೂ ಹಣ ಕಳೆದುಕೊಳ್ಳಬೇಕಾಗಿರುತ್ತದೆ ಎಂದು ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಸರ್ಕಾರಿ ವೈದ್ಯರೊಬ್ಬರು ಸ್ಟಾಕ್ ಮಾರ್ಕೆಟ್‌ನಲ್ಲಿ ಹಣ ದ್ವಿಗುಣ ಮಾಡಿಕೊಡುತ್ತೇವೆ ಎಂದು ಹೇಳಿದವರ ಮಾತು ನಂಬಿ ೮೦ ಲಕ್ಷ ರೂಪಾಯಿ ಕಳೆದುಕೊಂಡು ವಂಚನೆಗೊಳಗಾಗಿದ್ದಾರೆ. ಇನ್ನು ಬ್ಯಾಂಕ್ ಉದ್ಯೋಗಿಯೇ ಒಬ್ಬರು ಡಿಜಿಟಲ್ ಅರೆಸ್ಟ್ ಗೆ ಒಳಗಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ವಿದ್ಯಾವಂತರೇ ಹೆಚ್ಚಾಗಿ ಆನ್‌ಲೈನ್ ವಂಚನೆಗೆ ಒಳಗಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಉದ್ಯೋಗಕ್ಕೆ ಸಂಬAಧಿಸಿದ ವಂಚನೆ, ಆನ್‌ಲೈನ್ ಲೋನ್ ಗೆ ಸಂಬAಧಿಸಿದ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಜನರಲ್ಲಿ ಜಾಗೃತಿ ಮೂಡಿದ ಹಿನ್ನೆಲೆಯಲ್ಲಿ ಒಟಿಪಿ ಪಡೆದು ಮಾಡುತ್ತಿದ್ದ ವಂಚನೆ, ಮ್ಯಾಟ್ರಿಮೊನಿ ಬಳಸಿ ಮಾಡುತ್ತಿದ್ದ ವಂಚನೆಗಳು ಬಹುತೇಕ ಕಡಿಮೆಯಾಗಿವೆ. ಹೀಗಾಗಿ ಜನ ಎಲ್ಲ ರೀತಿಯ ವಂಚನೆ ಜಾಲಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಎಎಸ್‌ಪಿ ಕೃಷ್ಣಮೂರ್ತಿ, ಸಿಇಎನ್ ಠಾಣೆ ಇನ್ಸ್ ಪೆಕ್ಟರ್ ಗವಿರಾಜ್, ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ರಾಜೇಶ್, ಕಾರ್ಯದರ್ಶಿ ತಾರಾನಾಥ್ ಉಪಸ್ಥಿತರಿದ್ದರು.

ಗೋಲ್ಡನ್ ಅವರ್
ಆನ್‌ಲೈನ್ ವಂಚನೆಗೆ ಒಳಗಾಗಿರುವುದು ತಿಳಿಯುತ್ತಿದ್ದಂತೆ ವಂಚನೆಗೊಳಗಾದವರು ಎನ್‌ಸಿಸಿಆರ್‌ಪಿಯ ಟೋಲ್ ಫ್ರೀ ನಂಬರ್ ೧೯೩೦ಗೆ ಕರೆ ಮಾಡಿ ತಿಳಿಸಬೇಕು. ಜೊತೆಗೆ ಬ್ಯಾಂಕ್ ಖಾತೆಯ ವಿವರ ಹಾಗೂ ಯುಪಿಐ ಮಾಹಿತಿ ನೀಡಬೇಕು. ಆಗ ಬ್ಯಾಂಕ್ ಖಾತೆಗಳನ್ನು ತಾತ್ಕಾಲಿಕವಾಗಿ ಫ್ರೀಸ್ ಮಾಡಿಸಲಾಗುತ್ತದೆ. ಬಳಿಕ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಎಸ್‌ಪಿ ವಿಕ್ರಮ್ ಅಮಟೆ ತಿಳಿಸಿದರು.
ಹೀಗೆ ವಂಚನೆಗೊಳಗಾದವರ ಮತ್ತು ವಂಚಕರ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡುವ ಮೂಲಕ ಹಣದ ರಕ್ಷಣೆ ಮಾಡಬಹುದು. ಒಂದು ವೇಳೆ ನೀವು ಟೋಲ್ ಫ್ರೀ ನಂಬರ್‌ಗೆ ಕರೆ ಮಾಡಿ ವಂಚನೆಗೊಳಗಾದ ಕೂಡಲೇ ಮಾಹಿತಿ ನೀಡದೆ ಇದ್ದಲ್ಲಿ ಕಳೆದುಕೊಂಡ ಹಣ ಮರಳಿ ಪಡೆಯುವುದು ಕಷ್ಟವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಿಇಎನ್ ಠಾಣೆಗಳು ಮೇಲ್ದರ್ಜೆಗೆ
ಇತ್ತೀಚಿನ ವರ್ಷಗಳಲ್ಲಿ ಸೈಬರ್ ಕ್ರೆÊಂ ಹಾಗೂ ಆನ್ ಲೈನ್ ವಂಚನೆಗಳು ಹೆಚ್ಚಾದ ಪರಿಣಾಮ ಪ್ರತಿ ಜಿಲ್ಲೆಗೆ ಒಂದರAತೆ ಸಿಇಎನ್ ಪೊಲೀಸ್ ಠಾಣೆಗಳನ್ನು ಆರಂಭಿಸಲಾಗಿದೆ. ಈ ಠಾಣೆಗಳ ಇನ್ಸ್ ಪೆಕ್ಟರ್ ಜಿಲ್ಲೆಯ ನೋಡೆಲ್ ಅಧಿಕಾರಿಯಾಗಿರುತ್ತಾರೆ. ಇದೀಗ ಸಿಇಎನ್ ಠಾಣೆಯ ಪ್ರಾಮುಖ್ಯತೆ ಮನಗಂಡಿರುವ ಸರ್ಕಾರ ಠಾಣೆಗಳನ್ನು ಮೇಲ್ದರ್ಜೆಗೇರಿಸಿದೆ ಎಂದು ವಿಕ್ರಮ್ ಅಮಟೆ ತಿಳಿಸಿದರು.
ಸಿಇಎನ್ ಠಾಣೆಯ ಉಸ್ತುವಾರಿಗಾಗಿ ಪ್ರತ್ಯೇಕ ಎಎಸ್‌ಪಿ ಹುದ್ದೆ ಸೃಷ್ಟಿಸಲಾಗಿದೆ. ಡಿವೈಎಸ್‌ಪಿ ದರ್ಜೆಯ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ. ಈ ಮೂಲಕ ಆನ್ ಲೈನ್ ವಂಚನೆ ಹಾಗೂ ಸೈಬರ್ ಕ್ರೆÊಂಗೆ ಕಡಿವಾಣ ಹಾಕಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಮಾಹಿತಿ ನೀಡಿದರು.
ಇದಲ್ಲದೆ ಚಿಕ್ಕಮಗಳೂರು ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಗೆ ಸೈಬರ್ ಕ್ರೆÊಂ ಬಗ್ಗೆ ಪ್ರಾಥಮಿಕ ತರಬೇತಿ ನೀಡಲಾಗಿದ್ದು, ಆಯಾ ಠಾಣೆಗಳ ವ್ಯಾಪ್ತಿಯಲ್ಲಿ ಈ ಸಂಬAಧಿತ ಯಾವುದೇ ಪ್ರಕರಣಗಳು ನಡೆದಲ್ಲಿ ಆಯಾ ಠಾಣಾ ಮಟ್ಟದಲ್ಲೇ ಪ್ರಕರಣ ದಾಖಲಿಸಲು ವ್ಯವಸ್ಥೆ ಮಾಡಲಾಗಿದೆ.

ಜಿಲ್ಲೆಯಲ್ಲಿ ೩೧ ಪ್ರಕರಣ
೨೦೨೪ರ ಆರಂಭದಿAದ ಇದುವರೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ೩೧ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಿಗೆ ಸಂಬAಧಿಸಿದAತೆ ಜನ ಬರೋಬ್ಬರಿ ೨.೪೫ ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ಎಸ್‌ಪಿ ವಿಕ್ರಮ್ ಅಮಟೆ ಮಾಹಿತಿ ನೀಡಿದರು.
ಈ ಪ್ರಕರಣಗಳಲ್ಲಿ ೨ ಪತ್ತೆಯಾಗುವ ಹಂತದಲ್ಲಿದ್ದು, ವಿಚಾರಣೆ ಮುಂದುವರಿದಿದೆ. ಆದರೆ ಜನ ಕಳೆದುಕೊಂಡಿರುವ ಹಣದಲ್ಲಿ ಕೇವಲ ೧೦ ಲಕ್ಷ ರೂ. ಮಾತ್ರ ರಿಕವರಿ ಮಾಡಿಕೊಡಲಾಗಿದೆ. ಜನ ತಡವಾಗಿ ದೂರು ನೀಡಿದ್ದರಿಂದಲೇ ಹಣವನ್ನು ರಿಕವರಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜನ ವಂಚನೆಗೊಳಗಾದಾಕ್ಷಣ ಟೋಲ್ ಪ್ರೀ ನಂಬರ್ ೧೯೩೦ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net