

ಆರ್‌ಎಸ್‌ಎಸ್ ಪ್ರಮುಖ ಸುಧೀರ್ ಸಿಂಹ ಘೋರ್ಪಡೆ ಎಚ್ಚರಿಕೆ
ಹೊಸಪೇಟೆ: ಮತಾಂತರ, ಭಯೋತ್ಪಾದನೆಯ ಪೆಡಂಭೂತ ದೇಶಾದ್ಯಂತ ನೆಲೆ ಕಾಣಲು ಅವಣಿಸುತ್ತಿದ್ದು, ಮುಂದೊAದು ದಿನ ದಂಗೆಗಳು ಮನೆ ಬಾಗಿಲು ತಪ್ಪಲಿವೆ.ಅದಕ್ಕೂ ಮುನ್ನ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು ಎಂದು ಆರ್‌ಎಸ್‌ಎಸ್ ಉತ್ತರ ಕರ್ನಾಟಕ ಉತ್ತರ ಪ್ರಾಂತ ಸಂಪರ್ಕ ಪ್ರಮುಖ ಸುಧೀರ್ ಸಿಂಹ ಘೋರ್ಪಡೆ ಹೇಳಿದರು.
ಬಜರಂಗ ದಳದ ಶೌರ್ಯ ಜಾಗರಣ ರಥಯಾತ್ರೆ ಮಂಗಳವಾರ ನಗರಕ್ಕೆ ಆಗಮಿಸಿದ ಪ್ರಯುಕ್ತ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಡಿಜೆ ಹಳ್ಳಿ, ಕೆಜೆ ಹಳ್ಳಿ, ದಲಿತ ಶಾಸಕನ ಮನೆ ಮೇಲಿನ ದಾಳಿ, ಹುಬ್ಬಳ್ಳಿಯಲ್ಲಿ ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ್ದು ಸೇರಿದಂತೆ ಹಿಂದೂಗಳ ಮೇಲಿನ ಇತ್ತೀಚಿನ ಬಹುತೇಕ ದಾಳಿಗಳು ಪೂರ್ವನಿಯೋಜಿತ. ಆದರೆ, ಕೆಲ ನಿರ್ಲಜ್ಯ ರಾಜಕಾರಣಿಗಳು ಆರೋಪಿಗಳ ಪರ ವಕಾಲತ್ತು ವಹಿಸುತ್ತಿದ್ದಾರೆ. ದೇಶದ ತುಷ್ಠೀಕರಣ ರಾಜಕಾರಣ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಹಿಂದೂ ಸಮಾಜದಲ್ಲಿ ಯಾರೂ ಅಸ್ಪೃಷ್ಯರಲ್ಲ. ಮೇಲು- ಕೀಳು ಎಂಬುದು ಬ್ರಿಟೀಷ್, ಮುಸ್ಲಿಂ ಆಡಳಿತ ಹಾಗೂ ಕಮುನಿಷ್ಟ ಸಿದ್ಧಾಂತದ ನೆಪದಲ್ಲಿ ಅಸಮಾನತೆಯ ವಿಷ ಬೀಜ ಬಿತ್ತಿದ್ದಾರೆ. ಇತ್ತೀಚೆಗೆ ಟಿಪ್ಪು ಸುಲ್ತಾನ್ ಭಾವಚಿತ್ರದೊಂದಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರದ ಫ್ಲೆಕ್ಸ್ ಹಾಕುತ್ತಿದ್ದಾರೆ. ಈ ಮೂಲಕ ಹಿಂದೂ ಸಮಾಜದ ದೊಡ್ಡ ಭಾಗವಾದ ದಲಿತರನ್ನು ತಮ್ಮತ್ತ ಸೆಳೆಯುವುದು ಮುಸ್ಲಿಮರ ದುರುದ್ದೇಶವಾಗಿದೆ. ಕೆಲವರು ದುರುದ್ದೇಶದಿಂದಲೇ ಹಿಂದೂ ದೇವರು, ಸ್ವಾಮೀಜಿ, ಸಮಾಜವನ್ನು ಹೀಯಾಳಿಸುತ್ತಿದ್ದಾರೆ. ಅಂತವರ ವಿರುದ್ಧ ಕಠಿಣ ಕ್ರಮಗಳು ಜರುಗಿಸುತ್ತಿಲ್ಲ. ಹಿಂದೂ ಧರ್ಮವನ್ನು ನಾಶ ಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಹಿಂದೂಗಳು ಒಗ್ಗಟ್ಟಾಗಬೇಕು. ಯುವಕರಲ್ಲಿ ಸ್ವಾಭಿಮಾನ, ರಾಷ್ಟ್ರ ಭಕ್ತಿಯನ್ನು ಮೂಡಿಸಬೇಕು ಎಂದು ಸಲಹೆ ನೀಡಿದರು.
ಅಮರಾವತಿ ಚಿಂತಾಮಣಿ ಮಠದ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮೀಜಿ ಆಶೀರ್ವಚನ ನೀಡಿ, ಧರ್ಮ ರಕ್ಷಣೆಗಾಗಿ ಮಕ್ಕಳಲ್ಲಿ ಶೌರ್ಯವನ್ನು ಬೆಳೆಸಬೇಕು. ಧರ್ಮದಲ್ಲಿ ಅಸಹಾಯಕರಾಗಿ ಎಂದೂ ಭೋದಿಸುವುದಿಲ್ಲ. ಪರಿಸ್ಥಿತಿಗನುಗುಣವಾಗಿ ಶೌರ್ಯವನ್ನೂ ಮೆರೆಯಬೇಕು ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಭೋದಿಸಿದ್ದಾರೆ. ಹಿಂದೂ ಧರ್ಮ, ಸನಾತನದ ಮೂಲ ತಿರುಳು ಅರಿಯಬೇಕು ಎಂದು ಹೇಳಿದರು.
ಶೌರ್ಯಯಾತ್ರೆಗೆ ಅದ್ದೂರಿ ಸ್ವಾಗತ
ನಗರದ ಸಣ್ಣಕ್ಕಿ ವೀರಭದ್ರ ದೇಗುಲದಿಂದ ಆರಂಭವಾದ ಶೌರ್ಯಯಾತ್ರೆ ವಾಲ್ಮೀಕಿ ವೃತ್ತ, ಮದಕರಿ ವೃತ್ತ, ದೊಡ್ಡ ಮಸೀದಿ, ಗಾಂಧಿಚೌಕು, ಸಂಗೋಳಿಯಾರಣ್ಣ ವೃತ್ತ, ಪುಣ್ಯಮೂರ್ತಿ ವೃತ್ತ, ಕೇಂದ್ರ ಬಸ್‌ನಿಲ್ದಾಣ, ಡಾ.ಪುನೀತ್‌ರಾಜ್‌ಕುಮಾರ್ ವೃತ್ತದಮಾರ್ಗವಾಗಿ ವೆಂಕಟೇಶ್ವರ ಕಲ್ಯಾಣ ಮಂಟಪದ ವರೆಗೆ ಮೆರವಣಗೆ ನಡೆಯಿತು.
ಮೆರವಣಿಗೆಯಲ್ಲಿ ಹಿಂದೂ ಕಾರ್ಯಕರ್ತರು ರಸ್ತೆಗಳಲೆಲ್ಲ ಜೈ ಶ್ರೀರಾಮ್ ಜೈ ಜೈ ಶ್ರೀರಾಮ್, ಬೊಲೋ ಭಾರತ್ ಮಾತಾಕೀ ಜೈ ಘೋಷಣೆಗಳು ಮೊಳಗಿದವು. ರಥಯಾತ್ರೆಯಲ್ಲಿ ನೂರಾರು ಬೈಕ್ ಸವಾರರು ಬಾಗಿಯಾಗಿದ್ದರು. ಮತ್ತು ಎಲ್ಲರ ಕೈಗಳಲ್ಲಿ ಭಗ್ವಾ ಧ್ವಜಗಳು ಹಾರಾಡಿದವು.
ಟಿಎಂಎಇಎಸ್ ಪಾಲಿಟೆಕ್ನಿಕ್‌ನ ಮೈನಿಂಗ್ ಮತ್ತು ಮೆಟಲರ್ಜಿ ವಿಭಾಗದ ಮುಖ್ಯಸ್ಥ ಯೋಗಾನಂದ ಟಿ.ಎಲ್., ಶಂಕರ್ ಮೇಟಿ ಮತ್ತಿತರರು ವೇದಿಕೆಯಲ್ಲಿದ್ದರು.