

ಚಿತ್ರದುರ್ಗ
ಕಾದು ನೋಡಿ ಜೆಡಿಎಸ್,ಕಾಂಗ್ರೆಸ್ಸಿನಿಂದ ಹಲವು ಶಾಸಕರು ಬಿಜೆಪಿ ಸೇರುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿ,ನಾನಂತೂ ಕಾಂಗ್ರೆಸ್ಸಿಗೆ ಹೋಗುವುದಿಲ್ಲ. ಸ ಚಿವ ನಾರಾಯಣಗೌಡರು ಕಾಂಗ್ರೆಸ್ಸಿಗೆ ಹೋಗುತ್ತಾರೆಂಬ ಸುದ್ದಿ ಇದೆ,ಆದರೆ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬಂದ ಶಾಸಕರು ಯಾರೂ ಹೋಗುವುದಿಲ್ಲ ಎಂದರು.
ಮಾರ್ಚ್ 9ರಂದು ಕಾಂಗ್ರೆಸ್ ಕರೆ ನೀಡಿರುವ ಬಂದ್‌ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ,ಅವರಿಗೆ ಮಾಡಲು ಬೇರೆ ಕೆಲಸ ಇಲ್ಲ. ನಿ ರುದ್ಯೋಗಿಗಳಾಗಿದ್ದಾರೆ. ಜೀವಂತ ಇದ್ದೇವೆ ಎಂದು ತೋರಿಸಿಕೊಳ್ಳಲು ಶೋಆಪ್‌ಗೆ ಪ್ರತಿಭಟಿಸುತ್ತಿದ್ದಾರೆ. ಕಲೆಕ್ಷನ್ ಶೂರರಾ ಗಿರುವ ಅವರ ಬಾಯಲ್ಲಿ ಭ್ರಷ್ಟಾಚಾರ ವಿರುದ್ಧದ ಮಾತುಗಳು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಎಂದು ಸಿಎಂ ಬಸವ ರಾಜ ಬೊಮ್ಮಾಯಿ ಕಲೆಕ್ಷನ್‌ಗೆ ಮುಂದಾಗಿದ್ದಾರೆಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಕ್ಕೆ ತಿರುಗೇ ಟು ನೀಡಿದರು.
ಭ್ರಷ್ಟಾಚಾರದ ಛತ್ರಿ ಕೆಳಗೆ ಪ್ರಧಾನಿ ನರೇಂದ್ರ ಅವರು ನಿಂತಿದ್ದಾರೆಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಟೀಕೆ ಗೆ,ಜನರ ಚಪ್ಪಾಳೆ,ಶಿಳ್ಳೆ ಗಿಟ್ಟಿಸಲು ಖರ್ಗೆ ಭಾಷಣ ಮಾಡುತ್ತಾರೆ. ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಐದು ನೂರು ರೂ.ಕೊಟ್ಟು ಜನರನ್ನು ಕರೆದುಕೊಂಡು ಬನ್ನಿ ಎಂದಿದ್ದಾರೆ. ಸಮಾವೇಶಕ್ಕೆ ಬರುವ ಜನರ ಚಪ್ಪಾಳೆಗಾಗಿ ಹೀಗೆ ಮಾತನಾಡುತ್ತಾರೆ.
ಬಿ.ಎಸ್.ವೈ.ಭೀಷ್ಮ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಬಲಿಗರಿಗೆ ಟಿಕೆಟ್ ತಪ್ಪುವ ವಿಚಾರ ಸತ್ಯಕ್ಕೆ ದೂರು. ಕಾಂಗ್ರೆಸ್ಸಿನಲ್ಲಿ ಇ ದ್ದಂತೆ ನಮ್ಮಲ್ಲಿ ಬಣಗಳಿಲ್ಲ. ನಮ್ಮ ಪಕ್ಷಕ್ಕೆ ಬಿ.ಎಸ್.ವೈ.ಭೀಷ್ಮರಿದ್ದಂತೆ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಲುಕ್‌ಔಟ್ ನೋಟಿಸ್ ನೀಡಲಾಗಿದೆ. ಲೋಕಾಯುಕ್ತ ಅಧಿಕಾರಿಗಳು ಸ್ವತಂತ್ರವಾಗಿ ತನಿಖೆ ನಡೆಸುತ್ತಿದ್ದಾರೆ ಎಂದರು.
-----