

ಬಸವಾಪಟ್ಟಣ: ದಾಗಿನಕಟ್ಟೆ ಗ್ರಾಮದ ತೋಟಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದಾಗ ಹಾವು ಕಚ್ಚಿ ನವವಿವಾಹಿತನೊಬ್ಬ ಶುಕ್ರವಾರ ಮೃತಪಟ್ಟಿದ್ದಾನೆ.
ಸಮೀಪದ ಸಾಗರಪೇಟೆ ಕ್ಯಾಂಪ್ ನಿವಾಸಿ ಮಂಜು (25) ಮೃತಪಟ್ಟಾತ. ಮೂಲತಃ ಚಳ್ಳಕೆರೆ ತಾಲೂಕಿನ ಭೋಗನಹಳ್ಳಿ ಗ್ರಾಮದ ನಿವಾಸಿಯಾದ ಮಂಜು ಕಳೆದ ನಾಲ್ಕು ತಿಂಗಳ ಹಿಂದೆ ವಿವಾಹವಾಗಿದ್ದರು. ಕೂಲಿ ಕೆಲಸ ಮಾಡಿಕೊಂಡು ಸಾಗರಪೇಟೆ ಕ್ಯಾಂಪ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
ಸಂಜೆ ತೋಟದಲ್ಲಿ ಹಾವು ಕಚ್ಚಿ ಅಸ್ವಸ್ಥರಾದ ಕೂಡಲೇ ಜಿಲ್ಲಾಸ್ಪತ್ರೆಗೆ ಕೊಂಡೊಯ್ದದಾಗ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಈ ಸಂಬಂಧ ಮೃತರ ಸಂಬಂಧಿಕರು ಶನಿವಾರ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.