ಕೂಲಿಕಾರ್ಮಿಕರು ತೆರಳುತ್ತಿದ್ದ ಟಾಟಾಏಸ್ ಪಲ್ಟಿ 10 ಜನಕ್ಕೆ ಗಾಯ

250220 Sirwar Tataace Axident
Published on

ಸಿರವಾರ: ಸಮೀಪದ ಹೆಗ್ಗಡದಿನ್ನಿ ಬಳಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಕಾರ್ಮಿಕರ ಟಾಟಾಏಸ್ ಮಂಗಳವಾರ ಪಲ್ಟಿಯಾಗಿ 10 ಜನ ಗಾಯಗೊಂಡಿದ್ದಾರೆ. ಬ್ಯಾಗವಾಟ ಗ್ರಾಮದಿಂದ ಜಾಗಟಗಲ್ ಗ್ರಾಮಕ್ಕೆ ಕೂಲಿ ಕೆಲಸಕ್ಕೆ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿರುವಾಗ ಹೆಗ್ಗಡದಿನ್ನಿ ಸಮೀಪದ ಎದುರುಗಡೆ ಬೈಕ್ ವೇಗವಾಗಿ ಬಂದಿದ್ದರಿಂದ ಅಪಘಾತ ತಪ್ಪಿಸಲು ಹೋಗಿ ಕಾರ್ಮಿಕರ ವಾಹನ ಹೊಲದಲ್ಲಿ ಪಲ್ಟಿಯಾಗಿದೆ. ಸಿರವಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಗಂಭೀರವಾಗಿ ಗಾಯಗೊಂಡ ಶಿವಮ್ಮ, ಬುಡಮ್ಮ, ಹನುಮಂತಿ, ಹುಲಿಗೆಮ್ಮ, ಚನ್ನಮ್ಮ ಅವರನ್ನು ಜಿಲ್ಲಾ ಆಸ್ಪತ್ರೆ ಕಳುಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net