ಧರ್ಮದ ಹೆಸರಿನಲ್ಲಿ ಮಕ್ಕಳ ಕೈಗೆ ಲಾಂಗು, ಮಚ್ಚು ಬೇಡ

29-09-wadi 01
ವಾಡಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವಮಾನವ ಚಿಂತನಾಗೋಷ್ಠಿಯಲ್ಲಿ ಡಾ.ರಮೇಶ ಲಂಡನಕರ್ ಮಾತನಾಡಿದರು. ಮಹೇಶ ಎಸ್.ಜಿ., ಪದ್ಮರೇಖಾ ಆರ್.ಕೆ, ಮಡಿವಾಳಪ್ಪ ಹೆರೂರ್ ಇತರರಿದ್ದರು.
Published on

ವಾಡಿ: ಎಲ್ಲರಿಗೂ ಉತ್ತಮ ಶಿಕ್ಷಣ ಸಿಗಬೇಕು ಎಂಬುದು ಈಶ್ವರಚಂದ್ರ ವಿದ್ಯಾಸಾಗರ ಅವರ ಆಶಯವಾಗಿತ್ತು. ಆದರೆ ಇಂದು ದೇವರು, ಧರ್ಮದ ಹೆಸರಿನಲ್ಲಿ ಮಕ್ಕಳ ಕೈಗೆ ಮಚ್ಚು, ಲಾಂಗ್ ಕೊಡುತ್ತಿದ್ದೇವೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ರಮೇಶ ಲಂಡನಕರ್ ಬೇಸರ ವ್ಯಕ್ತಪಡಿಸಿದರು.

ನಿಜಶರಣ ಅಂಬಿಗರ ಚೌಡಯ್ಯ ಭವನದಲ್ಲಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ, ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯಿಂದ ಈಶ್ವರಚಂದ್ರ ವಿದ್ಯಾಸಾಗರ ಅವರ ೨೦೩ನೇ ಜನ್ಮದಿನ ಪ್ರಯುಕ್ತ ಗುರುವಾರ ಹಮ್ಮಿಕೊಂಡಿದ್ದ ವಿಶ್ವಮಾನವ ಚಿಂತನಾಗೋಷ್ಠಿಯಲ್ಲಿ ಮಾತನಾಡಿ, ಮಕ್ಕಳನ್ನು ಮನುಷ್ಯರನ್ನಾಗಿ ನೋಡುವುದನ್ನೇ ಮರೆತಿದ್ದೇವೆ. ಮೆಕಾನಿಕಲ್ ಶಿಕ್ಷಣ ಕೊಡುವ ವೇಗದಲ್ಲಿ ಯಾಂತ್ರಿಕ ಮಾನವನನ್ನಾಗಿ ಮಾಡುತ್ತಿದ್ದೇವೆ ಎಂದು ಹೇಳಿದರು.

ಶಿಕ್ಷಣ ಉಳಿಸಿ ಸಮಿತಿ ರಾಜ್ಯ ಕಾರ್ಯದರ್ಶಿ ಮಹೇಶ ಎಸ್.ಜಿ.ಮಾತನಾಡಿದರು. ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಜಿಲ್ಲಾ ಸಮಿತಿ ಸದಸ್ಯ ಮಡಿವಾಳಪ್ಪ ಹೆರೂರ ಸಂವಾದ ನಡೆಸಿಕೊಟ್ಟರು. ಪ್ರಮುಖರಾದ ವಿ.ಕೆ. ಕೇದಿಲಾಯಿ, ಜಯದೇವ ಜೋಗಿಕಲ್ಮಠ, ಶ್ರವಣಕುಮಾರ ಮೊಸಳಗಿ, ಬಾಬುಮಿಯ್ಯ, ಭೀಮಶಾ ಜಿರೊಳ್ಳಿ, ಸಿದ್ದಯ್ಯಶಾಸ್ತ್ರೀ ನಂದೂರಮಠ, ವೀರಣ್ಣ ಯಾರಿ, ಚಂದ್ರು ಕರುಣಿಕ, ರವಿ ಕೊಳಕೂರು, ದೇವಿಂದ್ರ ಕರದಳ್ಳಿ, ಶೋಭಾ ವಿನಿ, ವೀರಭದ್ರಪ್ಪ ಆರ್.ಕೆ., ಸೀತಾಬಾಯಿ ಹೆರೂರು, ಮಂದಾಕಿನಿ ದೋಶೆಟ್ಟಿ, ಶ್ರೀದೇವಿ ಮಲ್ಕಂಡಿ, ಶರಣಕುಮಾರ ದೋಶೆಟ್ಟಿ ಇತರರಿದ್ದರು.
ಶಿಕ್ಷಣ ಉಳಿಸಿ ಸಮಿತಿ ಸದಸ್ಯೆ ಪದ್ಮರೇಖಾ ಆರ್.ಕೆ.ಪ್ರಾಸ್ತಾವಿಕ ಮಾತನಾಡಿದರು.

ಜನಾಕಲಾ ಸಮಿತಿಯ ಕಲಾ ತಂಡದಿಂದ ಪ್ರಗತಿಪರ ಗೀತ ಗಾಯನ ಪ್ರಸ್ತುತಪಡಿಸಲಾಯಿತು. ಸಾಯಬಣ್ಣ ನಾಟೇಕರ್ ನಿರೂಪಣೆ ಮಾಡಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net