ಅನಂತನಾರಾಯಣ ವಾದ್ಯಾರ್‌ಗೆ ವ್ಯಾಸಜ್ಯೋತಿ ಪ್ರಶಸ್ತಿ

Vijayavani-Featured-Image
Published on

ಬೆಂಗಳೂರು: ಭಾರತೀಯ ವಿದ್ಯಾಭವನ ಮತ್ತು ಜ್ಯೋತಿ ಚಾರಿಟಬಲ್ ಟ್ರಸ್ಟ್ ನೀಡುವ 2024ನೇ ಸಾಲಿನ ವ್ಯಾಸಜ್ಯೋತಿ ಪ್ರಶಸ್ತಿಯು ವೇದಬ್ರಹ್ಮ ಅನಂತನಾರಾಯಣ ವಾದ್ಯಾರ್ ಅವರಿಗೆ ಸಂದಿದೆ.

ಪ್ರಶಸ್ತಿಯು ನಗದು ಮತ್ತು ಫಲಕವನ್ನು ಒಳಗೊಂಡಿರುತ್ತದೆ. ಈ ತಿಂಗಳ 21ರಂದು ಬೆಳಗ್ಗೆ 11.30ಕ್ಕೆ ಕೆ.ಆರ್.ಜಿ. ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜ್ಯೋತಿ ಚಾರಿಟಬಲ್ ಟ್ರಸ್ಟ್‌ನ ವಿಶ್ವಸ್ಥ ಎಂ. ನರಸಿಂಹನ್ ಅವರು ಪ್ರಶಸ್ತಿ ಪ್ರದಾನ ಮಾಡುವರು. ವಿದ್ಯಾಭವನದ ನಿರ್ದೇಶಕ ಎಚ್.ಎನ್. ಸುರೇಶ್ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ಡಾ. ಪಿ.ಎಸ್. ಗೀತಾ ಅವರು ಗುರುವಿನ ಮಹತ್ವ ಎಂಬ ವಿಷಯದ ಬಗೆಗೆ ಉಪನ್ಯಾಸ ನೀಡುವವರಿದ್ದಾರೆ ಎಂದು ಟ್ರಸ್ಟ್‌ನ ಜಂಟಿ ನಿರ್ದೇಶಕಿ ನಾಗಲಕ್ಶ್ಮೀ ಕೆ. ರಾವ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net