

ರಾಯಚೂರು: ಒಳಲೋಕ ಹೇಗಿದೆ ಎಂಬುದನ್ನು ವೇದವ್ಯಾಸರು ಮಹಾಭಾರತ ಮೂಲಕ ಕಟ್ಟಿಕೊಟ್ಟಿದ್ದು, ಲೋಕದ ಅನುಭಾವವನ್ನು ವ್ಯಾಸರು ತಮ್ಮ ಅನುಭಾವದ ಮೂಲಕ ನೋಡಿದ್ದಾರೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.
ಸ್ಥಳೀಯ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಭಾನುವಾರ ಸಂಜೆ ಏರ್ಪಡಿಸಿದ್ದ ಸನ್ಮಾನ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನಮ್ಮನ್ನು ಶೋಸಬೇಕಾದ ಗ್ರಂಥವಾಗಿ ಮಹಾಭಾರತವನ್ನು ನೋಡಬೇಕು ಎಂದರು.
ದುಃಖದ ಒಡಲಿನಿಂದ ಅರಿವಿನಡೆಗೆ ಕರೆದೊಯ್ಯುವುದು ಮಹಾಭಾರತವಾಗಿದ್ದು, ಆ ಕಾಲದ ಸತ್ಯ, ಈ ಜಗದ ವೈಶಿಷ್ಠ, ಬಹುತ್ವ ನಿಯಮದಂತೆ ಜನರ ಮನಸ್ಸುಗಳನ್ನು ಶೋಸಿದ ಕಾರಣಕ್ಕೆ ಮಹಾಭಾರತ ಸೃಷ್ಠಿಯಾಗಿದೆ. ದುಃಖದ ಒಳಗೆ ಅರಿವಿನ ಕಿರಣದಿಂದ ಹೊಮ್ಮುವುದು ದುಃಖ ನಿವಾರಕ ಅರಿವಾಗಿದೆ.
ಚಾತುರ್ವಣಗಳು ನಮ್ಮೊಳಗಿದ್ದು, ನಮ್ಮನ್ನು ನಾವು ಶೋಸಿಕೊಳ್ಳಬೇಕು. ಹುಟ್ಟಿನಿಂದ ಚಾತುರ್ವಣವನ್ನು ಗುರುತಿಸಲಾಗಿಲ್ಲ. ನಾವು ಮಾಡುವ ಕೆಲಸದಿಂದ ಚಾತುರ್ವಣವನ್ನು ಗುರುತಿಸಲಾಗಿದೆ. ನಮ್ಮೊಳಗೆ ಉತ್ತರವಿದ್ದಾಗ ಇನ್ನೊಬ್ಬರನ್ನು ಕೇಳುವ ಅವಶ್ಯಕತೆಯಿಲ್ಲ ಎಂದು ಲಕ್ಷ್ಮೀಶ ತೋಳ್ಪಾಡಿ ಹೇಳಿದರು.
ಈ ಸಂದರ್ಭದಲ್ಲಿ ಲಕ್ಷ್ಮೀಶ ತೋಳ್ಪಾಡಿಯನ್ನು ಕಸಾಪದಿಂದ ಸನ್ಮಾನಿಸಿ ಗೌರವಿಸಲಾಯಿತು. ಸಾಹಿತಿಗಳಾದ ಡಾ.ಶೀಲಾದಾಸ, ವೀರಹನುಮಾನ, ಡಾ.ಸಿ.ಬಿ.ಚಿಲ್ಕರಾಗಿ, ಡಾ.ಖಾದರ್ ಬಾಷಾ, ಬಸವಂತರಾಯ ಕುರಿ, ಸಂವಾದದಲ್ಲಿ ಪಾಲ್ಗೊಂಡಿದ್ದರು.
ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು ಅಧ್ಯಕ್ಷತೆ ವಹಿಸಿದ್ದು. ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ, ಪದಾಕಾರಿಗಳಾದ ತಾಯಪ್ಪ ಹೊಸೂರು, ನಾಗಪ್ಪ ಹೊರಪ್ಯಾಟಿ, ರಾವುತರಾವ್ ಬರೂರ ಉಪಸ್ಥಿತರಿದ್ದರು.