ಮಂಗ್ಳೂರಿನ ರಜನಿಗೆ ಲಕ್ಷ್ಮಣ್ ಪ್ರಶಂಸೆ: ಪ್ರಾಣಿ ಸೇವೆ ಮೆಚ್ಚಿದ ಮಾಜಿ ಕ್ರಿಕೆಟಿಗ

vvs tweet
Published on

ಮಂಗಳೂರು: ಆಪತ್ತಿಗೊಳಗಾದ ಪ್ರಾಣಿ, ಪಕ್ಷಿಗಳನ್ನು ಸಲಹುತ್ತಿರುವ ಮತ್ತು ಬೀದಿ ನಾಯಿಗಳಿಗೆ ಪ್ರತಿದಿನ ಆಹಾರ ನೀಡುವ ಮೂಲಕ ಜನಪ್ರಿಯರಾದ ಮಂಗಳೂರಿನ ರಜನಿ ಶೆಟ್ಟಿಯವರನ್ನು ಮಾಜಿ ಕ್ರಿಕೆಟಿಗ ವಿ.ವಿ.ಎಸ್.ಲಕ್ಷ್ಮಣ್ ಪ್ರಶಂಸಿಸಿದ್ದಾರೆ.

ರಜನಿ ಶೆಟ್ಟಿ ನಾಯಿಯನ್ನು ಬಾವಿಯಿಂದ ರಕ್ಷಿಸಿದ ಫೋಟೋವನ್ನು ಟ್ವೀಟ್ ಮಾಡಿರುವ ಲಕ್ಷ್ಮಣ್, ಮಂಗಳೂರಿನ ರಜನಿ ಶೆಟ್ಟಿ ನೂರಾರು ಬೀದಿ ನಾಯಿಗಳಿಗೆ ಆಹಾರ ನೀಡುತ್ತಾರೆ, ಬಾವಿಗೆ ಇಳಿದು ರಕ್ಷಿಸುತ್ತಾರೆ, ಅನಾಥ, ಗಾಯಗೊಂಡಿರುವ ಮತ್ತು ಅಂಗವೈಕಲ್ಯಕ್ಕೊಳಗಾದ ಶ್ವಾನಗಳನ್ನು ಸಲಹುತ್ತಾರೆ, ಅವರಿಗೆ ಹ್ಯಾಟ್ಸಾಫ್ ಎಂದು ಬರೆದಿದ್ದಾರೆ. ಇದಕ್ಕೆ ಹಲವರು ಪ್ರತಿಕ್ರಿಯಿಸಿ ಮೆಚ್ಚುಗೆಯನ್ನೂ ಸೂಚಿಸಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ರಜನಿ ಶೆಟ್ಟಿ, ಬೆಟರ್ ಇಂಡಿಯಾ ಪೋರ್ಟಲ್‌ನಲ್ಲಿ ನನ್ನ ಬಗೆಗಿನ ಲೇಖನ ಓದಿ ಲಕ್ಷ್ಮಣ್ ಅವರು ಈ ಪೋಸ್ಟ್ ಹಾಕಿದ್ದಾರೆ, ಇದರಿಂದ ಖುಷಿಯಾಗಿದೆ ಎಂದು ಹೇಳಿದ್ದಾರೆ. ಬಾಡಿಗೆಯ ಪುಟ್ಟ ಮನೆಯಲ್ಲಿ ಪತಿ ಮತ್ತು ಮೂವರು ಮಕ್ಕಳೊಂದಿಗೆ ವಾಸಿಸುತ್ತಿರುವ ರಜನಿ ಶೆಟ್ಟಿ ಪ್ರತಿ ದಿನ ಆರು ನೂರರಷ್ಟು ಬೀದಿನಾಯಿಗಳಿಗೆ ಊಟ ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net