ವಿವಿ ಸಂಘದ ಮಹಾಜನ ಸಭೆ ಮುಂದೂಡಿ

Kampli vv Meet
ಕಂಪ್ಲಿಯಲ್ಲಿ ಏರ್ಪಡಿಸಿದ್ದ ವಿವಿ ಸಂಘದ ಆಜೀವ ಸದಸ್ಯರ ಸಭೆಯಲ್ಲಿ ಕೆ.ಎಂ.ಹೇಮಯ್ಯಸ್ವಾಮಿ ಮಾತನಾಡಿದರು. ಪ್ರಮುಖರಾದ ಅರವಿ ಬಸವನಗೌಡ, ಪಿ.ಮೂಕಯ್ಯಸ್ವಾಮಿ, ವಾಲಿಕೊಟ್ರಪ್ಪ, ಎಸ್.ಎಂ.ನಾಗರಾಜ, ಕೆ.ಸಣ್ಣ ಗವಿಸಿದ್ದಪ್ಪ ಇದ್ದರು.
Published on

ಕಂಪ್ಲಿ: ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಮಹಾಜನ ಸಭೆ 2024ರ ಮಾ.22ರಂದು ನಿಗದಿಪಡಿಸಿದ್ದು, ಮೊದಲು ವಿಶೇಷ ಸಭೆ ನಡೆಸಬೇಕೆಂದು ಸಂಘದ ಆಜೀವ ಸದಸ್ಯ ಕೆ.ಎಂ.ಹೇಮಯ್ಯಸ್ವಾಮಿ ಹೇಳಿದರು.

ಇಲ್ಲಿನ ವೀರಶೈವ ಸಂಘದ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ವಿವಿ ಸಂಘದ ತಾಲೂಕು ಆಜೀವ ಸದಸ್ಯರ ಸಭೆಯಲ್ಲಿ ಮಾತನಾಡಿದರು.

14 ಜನ ಗ್ರಾಮೀಣ ಭಾಗದ ಸದಸ್ಯರನ್ನು, ಅಖಂಡ ಜಿಲ್ಲೆಯ ಆಯಾ ತಾಲೂಕಿನ ಗ್ರಾಮಗಳ ಸದಸ್ಯರನ್ನೇ ಆಯ್ಕೆ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲು ವಿಶೇಷ ಮಹಾಜನ ಸಭೆ ಜರುಗಿಸಬೇಕು. ನೂತನ ಆಜೀವ ಸದಸ್ಯರನ್ನು ಆಯ್ಕೆ ಮಾಡುವ ಬಗ್ಗೆಯೂ ತೀರ್ಮಾನವಾಗಬೇಕು. ಪ್ರತಿ ತಾಲೂಕಿನಲ್ಲಿ ಸಂಘದ ಶಿಕ್ಷಣ ಸಂಸ್ಥೆ ತೆರೆಯಬೇಕು. ಈ ಕುರಿತು ತೀರ್ಮಾನ ತೆಗೆದುಕೊಳ್ಳಲು ವಿಶೇಷ ಮಹಾಜನ ಸಭೆ ಮೊದಲು ಆಯೋಜಿಸಬೇಕು. ಇದಕ್ಕಾಗಿ 2024ರ ಮಾ.22ರಂದು ನಿಗದಿಗೊಳಿಸಿದ ಮಹಾಜನ ಸಭೆಯನ್ನು ಮುಂದೂಡಬೇಕು ಎಂದು ಒತ್ತಾಯಿಸಿದರು.

ಸಂಘದ ಆಜೀವ ಸದಸ್ಯರಾದ ಅರವಿ ಬಸವನಗೌಡ, ಪಿ.ಮೂಕಯ್ಯಸ್ವಾಮಿ, ವಾಲಿಕೊಟ್ರಪ್ಪ, ಎಸ್.ಎಂ.ನಾಗರಾಜ, ಕೆ.ಸಣ್ಣ ಗವಿಸಿದ್ದಪ್ಪ, ಕಲ್ಗುಡಿ ವಿಶ್ವನಾಥ, ಕೆ.ವಿರೂಪಾಕ್ಷಪ್ಪ, ಎಚ್.ನಾಗರಾಜ, ಡಾ.ವೀರನಗೌಡ್ರು, ಕೆ.ಚಂದ್ರಶೇಖರ, ಉಗಾದಿ ಶಿವರಾಜ, ಉಗಾದಿ ದೊಡ್ಡ ಬಸವರಾಜ, ಹೊನ್ನಳ್ಳಿ ಗಂಗಾಧರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net