ವಿಶ್ವವಿದ್ಯಾಲಯದಲ್ಲಿ ಪರಿಸರ ದಿನಾಚರಣೆ

05GDG01
Published on

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್  ವಿಶ್ವವಿದ್ಯಾಲಯದಲ್ಲಿ ಇಂದು ದಿನಾಂಕ 05 ಜೂನ್ 2024ರಂದು ವಿಶ್ವವಿದ್ಯಾಲಯ, ಎನ್. ಎಸ್. ಎಸ್. ಕೋಶ ಹಾಗೂ ಜಿಲ್ಲಾ ಅರಣ್ಯ ಇಲಾಖೆ ಇವರುಗಳ ಸಹಯೋಗದೊಂದಿಗೆ ವಿಶ್ವ ಪರಿಸರದ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಸಬರಮತಿ ಆಶ್ರಮದ ಗಾಂಧಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸುವ ಮೂಲಕ ವಿಶ್ವವಿದ್ಯಾಲಯದ  ಕುಲಪತಿಗಳು(ಪ್ರಭಾರ) ಹಾಗೂ ಕುಲಸಚಿವರಾದ ಪ್ರೊ. ಡಾ . ಸುರೇಶ ವಿ. ನಾಡಗೌಡರ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು
ಪರಿಸರ ಸಮತೋಲನ ಕಾಪಾಡಲು ಹೆಚ್ಚು ಸಸಿಗಳನ್ನು ನೆಡಬೇಕು. ಅವುಗಳನ್ನು ಪಾಲನೆ, ಪೋಷಣೆ ಮಾಡಿ ಗಿಡಗಳಾದ ಮೇಲೆ ಸಂರಕ್ಷಣೆ ಮಾಡಬೇಕು. ಈ ಸಂರಕ್ಷಣೆಯ ಕಾಳಜಿಯಿಂದ  ಜೀವಿಗಳ ಪೋಷಣೆಗೆಯು ಸಾಧ್ಯವಾಗುತ್ತದೆ. ಹಾಗೂ ಯುವಜನತೆ ಪರಿಸರದ ಸಮೃದ್ದಿಗಾಗಿ ಕೊಡುಗೆ ನೀಡಬೇಕು. ಪರಿಸರ ಸಮೃದ್ಧಿಯಿಂದ ಇದ್ದರೆ ಮಾತ್ರ ಆರೋಗ್ಯಕರ ಜೀವನ ಸಾಧ್ಯ. ಯುವ ವಿದ್ಯಾರ್ಥಿಗಳಲ್ಲಿ ಪರಿಸರ ಕುರಿತಾದ ಕಾಳಜಿಯು ನಿರಂತರ ಮತ್ತು ಶಾಶ್ವತವಾಗಿರಲೆಂದು ವಿಶ್ವವಿದ್ಯಾಲಯದಲ್ಲಿ ಪ್ರತಿ ವರ್ಷ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗಿದೆ. ಇಂದು ವಿಶ್ವವಿದ್ಯಾಲಯದ ಆವರಣದಲ್ಲಿ ಸಾವಿರ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಒಟ್ಟು 50 ಸಾವಿರ ಗಿಡಗಳನ್ನು ನೆಟ್ಟು ವಿಶ್ವವಿದ್ಯಾಲಯವನ್ನು ಹಸಿರು ವಿಶ್ವವಿದ್ಯಾಲಯವನ್ನಾಗಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗದಗ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀಯುತ ಲೋಕರಾಜ ಮೀನಾ ಅವರು ಮಾತನಾಡಿ,
ಪ್ರಕೃತಿ ತನ್ನ ತನವನ್ನು ಕಳೆದುಕೊಳ್ಳುತ್ತಿದೆ. ತನ್ನ ಜೀವವೈವಿಧ್ಯತೆಯನ್ನು, ತನ್ನ ನೈಸರ್ಗಿಕ ಸೌಂದರ್ಯ, ತನ್ಮಯತೆಯನ್ನು ಉಳಿಸಿಕೊಳ್ಳಬೇಕಾದರೇ  ಪ್ರತಿಯೊಬ್ಬರು ಪರಿಸರ ಸಂರಕ್ಷಣೆಯ ಹೊಣೆಯನ್ನು ಹೊಂದಬೇಕು ಎಂದರು. ನಂತರದಲ್ಲಿ ವಿಶ್ವವಿದ್ಯಾಲಯದಲ್ಲಿ ಆವರಣದಲ್ಲಿ ಸಾವಿರ ವಿವಿಧ ರೀತಿಯ ಗಿಡಗಳನ್ನು ವಿದ್ಯಾರ್ಥಿಗಳು ಮತ್ತು ಬೋಧಕ ಮತ್ತು ಬೋಧಕೇತರ ವೃಂದದವರು ಸೇರಿ ನೆಟ್ಟು , ಪರಿಸರ ಪ್ರೇಮ ಮೆರೆದರು.
ಕಾರ್ಯಕ್ರಮದಲ್ಲಿ ಶ್ರೀ ಉಮೇಶ ಬಾರಕೇರ, ಡಾ. ಅಬ್ದುಲ್ ಅಜೀಜ್ ಮುಲ್ಲಾ, ಡಾ ಗಿರೀಶ ದೀಕ್ಷಿತ್, ಶಶಿಭಷಣ್ ದೇವೂರ, ಶ್ರೀ ಮೃತ್ಯುಂಜಯ ಹಿರೇಮಠ, ಎನ್.ಎಸ್.ಎಸ್. ಸಂಯೋಜನಾಧಿಕಾರಿ ಶ್ರೀ ಪ್ರಶಾಂತ ಮೇರವಾಡೆ, ಡಾ. ಉಡಚಪ್ಪ ಪೂಜಾರ ಮತ್ತು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಉಪನ್ಯಾಸಕರಾದ  ಶ್ರೀ ಪ್ರಕಾಶ ಮಾಚೇನಹಳ್ಳಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net