

ಹೂವಿನಹಡಗಲಿ: ಕೆಕೆಆರ್‌ಡಿಬಿಯ ವಿಶೇಷ ಅನುದಾನದ ಬಹುಪಾಲು ಹಣವನ್ನು ಸರ್ಕಾರ ವಿವೇಚನಾ ನಿಧಿ ಎಂದು ತೆಗೆದಿಟ್ಟ ಕಾರಣ ಈ ಭಾಗದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂದು ಶಾಸಕ ಕೃಷ್ಣನಾಯ್ಕ ಆರೋಪಿಸಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಬುಧವಾರ ಭವನದ ಮೊದಲ ಮಹಡಿ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಈ ವರ್ಷದ ಕೆಕೆಆರ್‌ಡಿಬಿಗೆ ಸರ್ಕಾರ ಐದು ಸಾವಿರ ಕೋಟಿ ರೂ. ವಿಶೇಷ ಅನುದಾನ ನೀಡುವುದಾಗಿ ತಿಳಿಸಿದೆ. ಅದರಲ್ಲಿ ಸಿಎಂ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗಾಗಿ ಸುಮಾರು 2 ಕೋಟಿ ರೂ. ವಿವೇಚನಾ ಕೋಟಾ ಎಂದು ತೆಗೆದಿಡುವುದರಿಂದ ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಪ್ರದೇಶಗಳ ಅಭಿವೃದ್ಧಿ ಆಗುತ್ತಿಲ. ಈ ಹಣ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗಬೇಕು ಎಂದ ಅವರು, ನೌಕರರ ಭವನ ಮಹಡಿ ಕಟ್ಟಡಕ್ಕೆ ವೈಯಕ್ತಿಕವಾಗಿ ಹಣ ನೀಡುವೆ ಎಂದರು.
ನೌಕರರ ಸಂಘದ ಅಧ್ಯಕ್ಷ ಎಂ.ಪಿ.ಎಂ. ಅಶೋಕ ಅಧ್ಯಕ್ಷತೆ ವಹಿಸಿದ್ದರು. ತಾಪಂ ಇಒ ಉಮೇಶ ಮೈನಹಳ್ಳಿ, ಉಪತಹಸೀಲ್ದಾರ್ ಮಲ್ಲಿಕಾರ್ಜುನ, ಬಿಇಒ ಮಹೇಶ ಪೂಜಾರ್, ಸಿಡಿಪಿಒ ರಾಮನಗೌಡ, ಗೌರವ ಅಧ್ಯಕ್ಷ ಎ.ಕೊಟ್ರಗೌಡ, ಚಂದ್ರು ಕೊಂಚಿಗೇರಿ ಇತರರಿದ್ದರು.