ವಿಟಿಯು ವಿದ್ಯಾರ್ಥಿಗಳಿಗೆ ಡಿ.21ರಿಂದ ಆನ್​ಲೈನ್​ ತರಗತಿ

VTU
Published on

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು(ವಿಟಿಯು) ಪ್ರಥಮ ಸೆಮಿಸ್ಟರ್​ ವಿದ್ಯಾರ್ಥಿಗಳ ಪುನಶ್ಚೇತನ ಕಾರ್ಯಕ್ರಮವನ್ನು ಆನ್​ಲೈನ್​ ಮೂಲಕವೇ ನಡೆಸಲು ತೀರ್ಮಾನಿಸಿದ್ದು, ಇದರ ಜತೆಗೆ ಡಿ.21ರಿಂದ ಆನ್​ಲೈನ್​ ಮೂಲಕವೇ ತರಗತಿ ಆರಂಭಿಸಲು ನಿರ್ಧರಿಸಿದೆ.

ಅಂತಿಮ ಸೆಮಿಸ್ಟರ್​ ತರಗತಿಗಳು ಈಗಾಗಲೇ ಆನ್​ಲೈನ್​ ಹಾಗೂ ಆಫ್​ಲೈನ್​ ಮೂಲಕ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಪ್ರಥಮ ವರ್ಷದ ಪ್ರವೇಶಾತಿ ಪ್ರಕ್ರಿಯೆ ಚಾಲ್ತಿಯಲ್ಲಿರುವ ಹಿನ್ನೆಲೆಯಲ್ಲಿ ಡಿ.14ರಿಂದ ಡಿ.19ರ ಅವಧಿಯಲ್ಲಿ ಪ್ರಥಮ ಸೆಮಿಸ್ಟರ್​ ವಿದ್ಯಾರ್ಥಿಗಳ ಪರಿಚಯ ಕಾರ್ಯಕ್ರಮವನ್ನು ಆನ್​ಲೈನ್​ ಮೂಲಕವೇ ನಡೆಸಬೇಕು. ವಿಳಂಬವಾಗಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೂ ಪ್ರತ್ಯೇಕವಾಗಿ ಪರಿಚಯ ಕಾರ್ಯಕ್ರಮ ನಡೆಸಬೇಕು. ಆನ್​ಲೈನ್​ ವ್ಯವಸ್ಥೆಯಲ್ಲಿ ಸಿಗಬಹುದಾದ ಸಮಯವನ್ನು ನೋಡಿಕೊಂಡು ಪರಿಚಯ ಕಾರ್ಯಕ್ರಮ ನಡೆಸಲು ಎಲ್ಲ ಇಂಜಿನಿಯರಿಂಗ್​ ಕಾಲೇಜುಗಳಿಗೆ ವಿಟಿಯು ಸೂಚನೆ ನೀಡಿದೆ.

ಪ್ರಥಮ ಸೆಮಿಸ್ಟರ್​ ವಿದ್ಯಾರ್ಥಿಗಳಿಗೆ ತರಗತಿಗಳು ಆನ್​ಲೈನ್​ ಮೂಲಕವೇ ಡಿ.21ರಿಂದ ಆರಂಭ ಮಾಡಬೇಕು. ಸರ್ಕಾರದಿಂದ ಅಥವಾ ವಿಶ್ವವಿದ್ಯಾಲಯದಿಂದ ಮುಂದಿನ ಆದೇಶ ಬರುವವರೆಗೂ ಆನ್​ಲೈನ್​ ಮೂಲಕವೇ ತರಗತಿಗಳನ್ನು ಮುಂದುವರಿಸಬೇಕು ಎಂದು ಕಾಲೇಜುಗಳಿಗೆ ನಿರ್ದೇಶನ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net