ವಿವಿಸಿಇ ತಂಡ ಚಾಂಪಿಯನ್

21
Published on

ಉತ್ತಮ ಪ್ರದರ್ಶನ ನೀಡಿದ ವಿವಿಸಿಇ ತಂಡ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮೈಸೂರು ವಿಭಾಗ ಮಟ್ಟದ ಟೇಬಲ್ ಟೆನಿಸ್ ಹಾಗೂ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಎನ್‌ಐಇ ಕಾಲೇಜು ವತಿಯಿಂದ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ಈ ಸಾಧನೆ ಮಾಡಿತು. ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ವಿವಿಸಿಇ ತಂಡವು 3-0 ಸೆಟ್‌ಗಳಿಂದ ಮಂಡ್ಯದ ಪಿಇಎಸ್‌ಸಿಇ ವಿರುದ್ಧ ಜಯ ಸಾಧಿಸಿತು. ಟೇಬಲ್ ಟೆನಿಸ್ ಫೈನಲ್ ಪಂದ್ಯದಲ್ಲಿ ವಿವಿಸಿಇ ತಂಡವು 3-2 ಸೆಟ್‌ಗಳಿಂದ ಎನ್‌ಐಇ ಕಾಲೇಜು ವಿರುದ್ಧ ಜಯ ಸಾಧಿಸಿತು.

ಇನ್ನು ಮಹಿಳೆಯರ ವಿಭಾಗದ ಟೇಬಲ್ ಟೆನಿಸ್ ಪಂದ್ಯಾವಳಿಯಲ್ಲಿ ಎನ್‌ಐಇ ಕಾಲೇಜು ಚಾಂಪಿಯನ್ ಆಗಿ ಹೊರಹೊಮ್ಮಿತು. ಅಂತಿಮ ಪಂದ್ಯದಲ್ಲಿ3-0 ಸೆಟ್‌ಗಳಿಂದ ಮಂಡ್ಯದ ಪಿಇಎಸ್‌ಸಿಇ ವಿರುದ್ಧ ಜಯ ಸಾಧಿಸಿತು. ಮಹಿಳೆಯರ ಷಟಲ್ ಬ್ಯಾಡ್ಮಿಂಟನ್‌ನಲ್ಲಿ ಜಿಎಸ್‌ಎಸ್‌ಎಸ್‌ಐಇಟಿಡಬ್ಲುೃ ತಂಡ ಪ್ರಥಮ ಸ್ಥಾನ ಪಡೆಯಿತು. ಅಂತಿಮ ಪಂದ್ಯದಲ್ಲಿ 2-0 ಸೆಟ್‌ಗಳಿಂದ ಎನ್‌ಐಇ ಕಾಲೇಜು ತಂಡದ ವಿರುದ್ಧ ಜಯ ಸಾಧಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net