ವಿಟಿಯುಗೆ ಮುಡಿಗೆ ಐದು ಪ್ರಶಸ್ತಿ

8Jaggu20
Published on

ಬೆಳಗಾವಿ: ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಎಕನಾಮಿಕ್ ಟೈಮ್ಸ್ ಎಡು ಟೆಕ್ ಸಮಿಟ್-2025 ನಲ್ಲಿ ಐದು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

ತಂತ್ರಜ್ಞಾನ ದೂರದೃಷ್ಟಿಯುಳ್ಳ ಅತ್ಯುತ್ತಮ ಕುಲಪತಿ ಪ್ರಶಸ್ತಿ ಒಳಗೊಂಡ ಐದು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಈಚೆಗೆ ಮುಂಬೈನ ಸಹರಾ ಸ್ಟಾರ್ ಹೋಟೆಲ್ನಲ್ಲಿ ನಡೆದ 2025ರ ಎಕನಾಮಿಕ್ ಟೈಮ್ಸ್ ತಾಂತ್ರಿಕ ಶಿಕ್ಷಣ ಸಮಿಟ್‌ನಲ್ಲಿ ಪಡೆದುಕೊಂಡಿದೆ.

ತಂತ್ರಜ್ಞಾನ ದೂರದೃಷ್ಟಿಯುಳ್ಳ ಅತ್ಯುತ್ತಮ ಕುಲಪತಿ, ರಾಷ್ಟ್ರೀಯ ಶಿಕ್ಷಣದ ನೀತಿಯ ಪರಿಣಾಮಕಾರಿ ಅಳವಡಿಕೆ, ತಂತ್ರಜ್ಞಾನ ಆಧಾರಿತ ಕೈಗಾರಿಕಾ ಶೈಕ್ಷಣಿಕ ಸಹಭಾಗಿತ್ವ, ಡಿಜಿಟಲ್ ಗ್ರಂಥಾಲಯ ಸೌಲಭ್ಯಗಳ ಅನುಷ್ಠಾನ, ತಂತ್ರಜ್ಞಾನ ಅವಲಂಬಿತ ಎಂಜಿನಿಯರಿಂಗ್ ವಿಶ್ವವಿದ್ಯಾಲಯ ಪ್ರಶಸ್ತಿ ಪಡೆದಿದೆ.

ವಿವಿಯು ವಿದ್ಯಾರ್ಥಿ ಕೇಂದ್ರಿತ ಸುವ್ಯವಸ್ಥೆ, ಕೌಶಲ ಆಧಾರಿತ ಔದ್ಯೋಗಿಕ ಬೇಡಿಕೆಯ ಶಿಕ್ಷಣದ ಪಠ್ಯಕ್ರಮ ಜಾರಿ, ಸಂಶೋಧನೆ ಮತ್ತು ನಾವೀನ್ಯತೆಯ ಸಂಸ್ಕೃತಿಯನ್ನು ಯುವ ಪೀಳಿಗೆಯಲ್ಲಿ ಬೆಳೆಸುವತ್ತ ಕ್ರಾಂತಿಕಾರಿ ಹೆಜ್ಜೆ ಇಡುತ್ತ ಕೈಗಾರಿಕಾ ಹಾಗೂ ವಿದ್ಯಾಸಂಸ್ಥೆ ಒಗ್ಗೂಡಿಸುವ ನಿಟ್ಟಿನಲ್ಲಿ ಅನೇಕ ಕ್ರಾಂತಿಕಾರಕ ಕಾರ್ಯಕ್ರಮ ಅನುಷ್ಠಾನಗೊಳಿಸಿದ ಪರಿಣಾಮ ಪ್ರತಿಷ್ಠಿತ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ತನ್ನದಾಗಿಸಿದೆ. ಈ ವೇಳೆ ಕುಲಪತಿ ಡಾ.ಎಸ್.ವಿದ್ಯಾಶಂಕರ್, ಕುಲಸಚಿವ ಈ ರಂಗಸ್ವಾಮಿ ಇತರರು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net