ಪ್ರತಿಯೊಬ್ಬರಿಗೂ ಸಂವಿಧಾನ ಮುಕ್ತವಾಗಲಿ ಕಲಿಯುವ ಹಕ್ಕು ನೀಡಿದೆ : ಕುಲಪತಿ ಡಾ.ವಿದ್ಯಾಶಂಕರ

vidyashankar11.jpeg
Published on

ಬೆಳಗಾವಿ : ಮುಕ್ತವಾಗಿ ಕಲಿಯುವ ಹಕ್ಕನ್ನು ಪ್ರಜಾಪ್ರಭುತ್ವ ಪ್ರತಿಯೊಬ್ಬರಿಗೂ ನೀಡಿದೆ. ಮುಂದುವರಿದ ತಂತ್ರಜ್ಞಾನದಿಂದ ನಮ್ಮ ದೇಶವನ್ನು ವಿಶ್ವಗುರು ಜಾಗತಿಕ ಶಕ್ತಿಯನ್ನಾಗಿ ಮಾಡಬಹುದು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ವಿದ್ಯಾಶಂಕರ್ ಎಸ್.ಹೇಳಿದರು.

ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರಿಸರ್ಚ್ ವತಿಯಿಂದ ಜೆಎನ್‌ಎಂಸಿಯಲ್ಲಿರುವ ಕೆಎಲ್‌ಇ ಸೆಂಟಿನರಿ ಕನ್ವೆನ್ಷನ್ ಸೆಂಟರ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಡಾ.ಎಸ್.ರಾಧಾಕೃಷ್ಣನ್ ಅವರ ಮೌಲ್ಯಗಳು ಮತ್ತು ತತ್ತ್ವಚಿಂತನೆಗಳನ್ನು ಸಾರ್ವತ್ರಿಕ ಮನೋಭಾವ ಮತ್ತು ವೈಜ್ಞಾನಿಕ ಜ್ಞಾನವನ್ನು ಹೆಚ್ಚಿಸುವುದು ಪ್ರತಿಯೊಬ್ಬ ಶಿಕ್ಷಕರ  ಕರ್ತವ್ಯವಾಗಿದೆ ಎಂದರು.

ಇದೇ ಸಂದರ್ಭಲ್ಲಿ ಸರ್ವೇಪಲ್ಲಿ ರಾಧಾಕೃಷ್ಣನ್ ಸೇರಿದಂತೆ 1916 ರಲ್ಲಿ ಕೆಎಲ್‌ಇ ಸೊಸೈಟಿಯನ್ನು ಸ್ಥಾಪಿಸಿದ ಸಪ್ತರ್ಷಿಗಳು ಎಂದು ಕರೆಯಲ್ಪಡುವ ಏಳು ಸಮರ್ಪಿತ ಶಿಕ್ಷಕರನ್ನು ಸ್ಮರಿಸಿ ಪೂಜೆ ಸಲ್ಲಿಸಲಾಯಿತು.  ಶಿಕ್ಷಕರಿಗಾಗಿ ಜನರಿಕ್ ಔಷಧಗಳಿಗಿಂತ ಬ್ರ್ಯಾಂಡೆಡ್ ಔಷಧಗಳೇ ಉತ್ತಮ ಎಂಬ ವಿಷಯದ ಕುರಿತು ಅಂತರ್ ಕಾಲೇಜು ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಪ್ರಮಾಣಪತ್ರಗಳನ್ನು ಮತ್ತು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಸಂಶೋಧನಾ ಪ್ರಶಸ್ತಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ.ಎಂ.ಎ.ಉಡಚನಕರ್, ಡಾ.ಎಂ.ಎನ್.ಗಂಗಾನೆ, ಡಾ.ಎಂ.ಎಸ್.ಗಣಾಚಾರಿ, ಡಾ.ಜ್ಯೋತಿ ನಾಗಮೋಟಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net