ವಿಟಿಯು 22ನೇ ಘಟಿಕೋತ್ಸವದಲ್ಲಿ ಮೂವರಿಗೆ ಡಾಕ್ಟರೇಟ್ ಪದವಿ ಪ್ರದಾನ

IMG-20230224-WA0007.jpg
Published on

ಬೆಳಗಾವಿ : ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 22ನೇ ಘಟಿಕೋತ್ಸವದಲ್ಲಿ ಶುಕ್ರವಾರ
ಮೂವರಿಗೆ ಡಾಕ್ಟರ್ ಆಫ್ ಸೈನ್ಸ್‌ ಗೌರವ ಪದವಿ ಹಾಗೂ 700ಕ್ಕೂ ಅಧಿಕ ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಯಿತು.

ಬೆಳಗಾಂ ಫೆರೋಕಾಸ್ಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಚಿನ ಸಬ್ನೀಸ್ ಹಾಗೂ ವ್ಯಾಬ್ಕೋ ಇಂಡಿಯಾ ಲಿಮಿಟೆಡ್ ನ ಅಧ್ಯಕ್ಷ ಲಕ್ಷ್ಮೀ ನಾರಾಯಣ ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಥ್ ಅವರು ಗೌರವ ಡಾಕ್ಟರೇಟ್(ಡಾಕ್ಟರ್ ಆಫ್ ಸೈನ್ಸ್) ಪದವಿ ಪ್ರದಾನ‌ಮಾಡಿದರು.‌ ಟೊಯೋಟಾ ಕಿರ್ಲೊಸ್ಕರ್ ಮೋಟರ್ ನ ಉಪಾಧ್ಯಕ್ಷರಾಗಿದ್ದ ದಿ.ವಿಕ್ರಮ ಕಿರ್ಲೋಸ್ಕರ್ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ಘೋಷಿಸಲಾಯಿತು.

53,415 ವಿದ್ಯಾರ್ಥಿಗಳಿಗೆ ಬಿಇ ಹಾಗೂ ಬಿ,ಟೆಕ್ ಪದವಿ,  1045 ಬಿಇ ಆರ್ಕಿಟೆಕ್ಚರ್ ಪದವಿ, 9 ಬಿ.ಪ್ಲ್ಯಾನ್ ಪದವಿ, 4279 ಎಂಬಿಎ ಪದವಿ, 2032 ಎಂಸಿಎ, 1366 ಎಂ.ಟೆಕ್ ಪದವಿ, 82 ಎಂ.ಆರ್ಕಿಟೆಕ್ಚರ್ ಪದವಿ, 1 ಪಿಜಿ ಡಿಪ್ಲೋಮಾ ಪದವಿ, 2 ಎಂಎಸ್ಸಿ ಇಂಜಿನಿಯರಿಂಗ್ ಪದವಿ, ನಾಲ್ವರು ವಿದ್ಯಾರ್ಥಿಗಳಿಗೆ ಡಬಲ್ ಡಿಗ್ರಿ ಪದವಿ ಹಾಗೂ 700 ಕ್ಕೂ ಅಧಿಕ ಸಂಶೋದನಾ ವಿದ್ಯಾರ್ಥಿಗಳಿಗೆ ಪಿಎಚ್.ಡಿ ಪದವಿ ಪ್ರದಾನ ಮಾಡಲಾಯಿತು. ವಿಟಿಯು ಕುಲಪತಿ ಎಸ್.ವಿದ್ಯಾಶಂಕರ ಸೇರಿದಂತೆ ವಿಟಿಯುನ ಕುಲಸಚಿವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net