

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಬಂಡಿಯ ನೊಗ ಹೊತ್ತು ಅಖಾಡಕ್ಕೆ ಇಳಿದ ಜೋಡಿ ಎತ್ತುಗಳು, ತೀರ್ಪುಗಾರರು ಸೀಟಿ ಊದುತ್ತಿದ್ದಂತೆ ಚಂಗನೆ ನೆಗೆದು ಮಿಂಚಿನಂತೆ ಓಡಿದವು.
ಇದು ಮೂಡಲಗಿ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಮಾರುತೇಶ್ವರ, ದುರ್ಗಾದೇವಿ ಜಾತ್ರೆ ಅಂಗವಾಗಿ ಮಂಗಳವಾರ ಗ್ರಾಮದ ಹೊರವಲಯದಜಮೀನಿನಲ್ಲಿ ನಡೆದ ಜೋಡೆತ್ತಿನ ಬಂಡಿ ಸ್ಪರ್ಧೆ ಮೈನವಿರೇಳಿಸಿತು.
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ 27ಕ್ಕೂ ಅಧಿಕ ಜೋಡೆತ್ತುಗಳು ಭಾಗವಹಿಸಿದ್ಸವು. ಎರಡು ನಿಮಿಷದಲ್ಲಿ ಗರಿಷ್ಠ ದೂರ ಕ್ರಮಿಸಲು ಪರಸ್ಪರ ಪೈಪೋಟಿ ನಡೆಸಿದವು. ಎತ್ತುಗಳ ಓಟದ ವೇಗ ಹೆಚ್ಚಿಸಲು ಬಂಡಿ ಚಾಲಕರು ಬಾರಕೋಲಿನಿಂದ ಬಾರಿಸಿ ಸದ್ದು ಮಾಡುತ್ತಿದ್ದರು.
ಸ್ಥಳದಲ್ಲಿ ನೆರೆದಿದ್ದ ಜನಸ್ತೋಮ ಶಿಳ್ಳೆ, ಚಪ್ಪಾಳೆ, ಕೇಕೆ ಹಾಕಿ ರೈತರಿಗೆ ಹುಮ್ಮಸ್ಸು ನೀಡಿತು. ಕಟ್ಟುಮಸ್ತಾದ ಎತ್ತುಗಳ ಮುಗದಾನು ಹಿಡಿದು ಹೆಜ್ಜೆ ಹಾಕುವ ಕುಸ್ತಿ ಪೈಲ್ವಾನರಂತಹ ರೈತರ ನಡಿಗೆಯು ರೋಮಾಂಚನಗೊಳಿಸುತ್ತದೆ.
ಜೋಡೆತ್ತುಗಳ ತೆರೆ ಬಂಡಿ ಸ್ಪರ್ಧೆಗೆ ಎತ್ತುಗಳ ಕಲರವ ತುಂಬಿತ್ತು.