ರಾಹುಲ್ ಗಾಂಧಿ ಅವರು ಆ ಮದುವೆಗೆ ಹೋಗಿದ್ದರು: ಅವರಿಗೆ ವೈಯಕ್ತಿಕ ಬದುಕೇ ಇಲ್ವಾ?: ಬಿಜೆಪಿ ವಿರುದ್ಧ ಉಗ್ರಪ್ಪ ಗರಂ

Ugrappa
Published on

ಬಳ್ಳಾರಿ: ರಾಹುಲ್​ ಗಾಂಧಿ ಅವರು ಎಲ್ಲೇ ಹೋದರೂ ವಿವಾದವಾಗುತ್ತೆ, ಅವರಿಗೆ ವೈಯಕ್ತಿಕ ಬದುಕೇ ಇಲ್ಲವೇ ಎಂದು ಬಿಜೆಪಿ ವಿರುದ್ಧ ಮಾಜಿ ಸಂಸದ ವಿ.ಎಸ್​. ಹರಿಹಾಯ್ದಿದ್ದಾರೆ.

ಬಳ್ಳಾರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಹತಾಶರಾಗಿದ್ದಾರೆ, ರಾಹುಲ್ ಗಾಂಧಿ ಅವರನ್ನು ಪತ್ರಕರ್ತರು ಮದುವೆಗೆ ಹೋದರೂ ವಿವಾದ ಮಾಡುತ್ತಾರೆ. ಬಿಜೆಪಿವರು ಎತ್ತಿ ತೋರಿಸುತ್ತಾರೆ ಎಂದು ಹೇಳಿದರು.

ಬಿಜೆಪಿ ನಾಯಕರು ಎಷ್ಟು ಜನ ಹೆಂಡತಿಯರನ್ನ ರಕ್ಷಣೆ ಮಾಡ್ತಾ ಇದ್ದೀರಿ, ಅವರಿಗೆ‌ ನಾವು ಮದುವೆ ಅಲ್ಲಿ ಮಾಡಬೇಡಿ ಇಲ್ಲಿ ಮಾಡಬೇಡಿ ಎಂದು ಹೆಳೋಕೆ ಆಗತ್ತಾ, ಮದುವೆಗೆ ಹೋಗಿದ್ದು ತಪ್ಪಾ, ನೀವೆಲ್ಲಾ ನೀವೆಲ್ಲಾ ರಾಮನ ಜಪ ಮಾಡುತ್ತೀರಿ. ಹಾಗಾದ್ರೆ ರಾಮ ಯಾಕೆ ಕಾಡಿಗೆ ಹೋದ? ಹೆಂಡತಿಯ ರಕ್ಷಣೆಗಾಗಿ ಕಾಡಿಗೆ ಹೋದ. ಎಷ್ಟು ಜನರು ನಿಮ್ಮ ಹೆಂಡತಿಯರ ರಕ್ಷಣೆ ಮಾಡುತ್ತೀರಿ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net