ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್‌ಕ್ಲೇವ್‌ನಲ್ಲಿ ಗಮನ ಸೆಳೆಯುತ್ತಿವೆ ವಿಆರ್‌ಎಲ್ ಮಳಿಗೆ

vrl 1
Published on

ಮೈಸೂರು: ‘ವಿಜಯಾನಂದ್ ಟ್ರಾವೆಲ್ಸ್’ ಪ್ರಸ್ತುತಿಯಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಂ.1 ಕನ್ನಡ ದೈನಿಕ ‘ವಿಜಯವಾಣಿ’ ಮಾಧ್ಯಮ ಸಹಯೋಗದೊಂದಿಗೆ ಆಯೋಜಿಸಿರುವ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್‌ಕ್ಲೇವ್‌ನಲ್ಲಿ ‘ವಿಆರ್‌ಎಲ್ ಟ್ರಾವೆಲ್ಸ್’, ‘ವಿಆರ್‌ಎಲ್ ಲಾಜಿಸ್ಟಿಕ್ ಲಿಮಿಟೆಡ್’ ಹಾಗೂ ‘ವಿಜಯವಾಣಿ’ ಮಳಿಗೆಗಳು ಜನರ ಗಮನ ಸೆಳೆಯುತ್ತಿವೆ.

ಮಳಿಗೆಗಳು ಇರುವ ಆವರಣವನ್ನು ಪ್ರವೇಶಿಸುವ ಸಂದರ್ಭದಲ್ಲಿಯೇ ‘ವಿಆರ್‌ಎಲ್ ಟ್ರಾವೆಲ್ಸ್’, ‘ವಿಆರ್‌ಎಲ್ ಲಾಜಿಸ್ಟಿಕ್ ಲಿಮಿಟೆಡ್’ ಹಾಗೂ ‘ವಿಜಯವಾಣಿ’ ಎದುರಾಗುತ್ತದೆ. ಈ ಮಳಿಗೆಗೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಭೇಟಿ ನೀಡಿ ಸಂಸ್ಥೆಯ ಕುರಿತು ಮಾಹಿತಿ ಪಡೆದರು.

‘ವಿಆರ್‌ಎಲ್ ಲಾಜಿಸ್ಟಿಕ್ ಲಿಮಿಟೆಡ್’ ಮಳಿಗೆಯಲ್ಲಿ ಸಂಸ್ಥೆಯು ದೇಶವ್ಯಾಪಿ ನೀಡುವ ಸರಕು ಸಾಗಾಣಿಕೆ ಸೇವೆಯ ಕುರಿತು ಜನರಿಗೆ ಮಾಹಿತಿ ನೀಡಲಾಗುತ್ತಿದೆ. ಸಂಸ್ಥೆಯು ಯಾವೆಲ್ಲ ರಾಜ್ಯಗಳಲ್ಲಿ ಸೇವೆಯನ್ನು ಹೊಂದಿದೆ, ನಮ್ಮಿಂದ ದೊರೆಯುವ ಸೇವೆಗಳು ಏನು ಎಂಬ ಕುರಿತು ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ.

ಜನರು ತಮ್ಮ ಸುಖಕರ ಪ್ರಯಾಣಕ್ಕೆ ‘ವಿಆರ್‌ಎಲ್ ಟ್ರಾವೆಲ್ಸ್’ಅನ್ನು ಆಯ್ಕೆ ಮಾಡಿಕೊಳ್ಳುವ ಸಲುವಾಗಿ ಸಾಕಷ್ಟು ಜನರು ಮಳಿಗೆಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದರು. ವಿಆರ್‌ಎಲ್ ಟ್ರಾವೆಲ್ಸ್‌ನಲ್ಲಿ ಪ್ರಯಾಣ ಮಾಡಲು ಬಯಸುವ ಪ್ರಯಾಣಿಕರು ಸಂಸ್ಥೆ ನೀಡಿರುವ ಕ್ಯೂಆರ್ ಕೋಡ್ ಬಳಸಿ ಅಥವಾ ವೆಬ್‌ಸೈಟ್  https://www.vrlbus.in/ ನಲ್ಲಿ ಬುಕ್ಕಿಂಗ್ ಮಾಡಿಕೊಂಡು ಶೇ.15 ರಷ್ಟು ರಿಯಾತಿ ಪಡೆಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net